ಭಾರತಕ್ಕೆ ವಾಪಾಸಾಗುವ ಅನಿವಾಸಿ ಭಾರತೀಯರಿಗೆ ಹಣಕಾಸು ಸಲಹೆಗಳು

Published : Aug 29, 2017, 07:51 PM ISTUpdated : Apr 11, 2018, 01:12 PM IST
ಭಾರತಕ್ಕೆ ವಾಪಾಸಾಗುವ ಅನಿವಾಸಿ ಭಾರತೀಯರಿಗೆ ಹಣಕಾಸು ಸಲಹೆಗಳು

ಸಾರಾಂಶ

ವಿದೇಶದಲ್ಲಿ ದುಡಿದು ನೆಲೆಸಲು ಭಾರತಕ್ಕೆ ವಾಪಾಸಾಗುವ ನಿರ್ಧಾರ ಅನಿವಾಸಿ ಭಾರತೀಯರಿಗೆ ಬಹುದೊಡ್ಡ ಸವಾಲು. ಆ ನಿರ್ಧಾರವನ್ನು ಆರ್ಥಿಕವಾಗಿ ಹೇಗೆ ನಿಭಾಯಿಸಬಹುದು ಎಂಬುವುದನ್ನು ತಿಳಿಯೋಣ

ನೆಲೆಸಲು ದೇಶಕ್ಕೆ ಹಿಂತಿಗುವಾಗ ಬಹಳಷ್ಟು ಆರ್ಥಿಕ ಯೋಚನೆಗಳು ಬಹಳಷ್ಟು ಅನಿವಾಸಿ ಭಾರತಿಯರಿಗೆ ಕಾಡುತ್ತವೆ. ಹೂಡಿಕೆ ಬಗ್ಗೆ ಅನಿಶ್ಚಿತತೆ ಮತ್ತು ತೆರಿಗೆ ಮುಂತಾದ ವಿಷಯಗಳು ಅವರಿಗೆ ತಲೆನೋವಾಗಿರುತ್ತದೆ. ಹೂಡಿಕೆ ಹಾಗೂ ತೆರಿಗೆ ಮುಂತಾದವುಗಳ ಬಗ್ಗೆ  ಅನಿವಾಸಿಗಳ ಮುಂದೆ ಏನೆಲ್ಲಾ ಆಯ್ಕೆಗಳಿವೆ ಎಂದು ನೋಡೋಣ.

ಹೂಡಿಕೆ:

ಹೊರದೇಶಗಳಲ್ಲಿ ದುಡಿದು ಭಾರತಕ್ಕೆ ವಾಪಸಾಗುವಾಗ ಎನ್ಆರ್ಐಗಳು ತಮ್ಮ ಸಂಪಾದನೆಯನ್ನು ಹಣದುಬ್ಬರದಿಂದ ಸುರಕ್ಷಿತವಾದ ಹಾಗೂ ತೆರಿಗೆ ಹೊರೆ ಕಡಿಮೆಯಿರುವ ಕಡೆ ಹೂಡಲು ಬಯಸುತ್ತಾರೆ. ಭಾರತದಲಲ್ಲಿ ಹೂಡಿಕೆ ಮಾಡಲು ಬಹಳಷ್ಟು ಅವಕಾಶ ಹಾಗೂ ಆಯ್ಕೆಗಳಿವೆ. ಮಾರುಕಟ್ಟೆಯನ್ನು ಹತ್ತಿರದಿಂದ ಗಮನಿಸದವರಿಗೆ ಹೂಡಿಕೆಯು ಸ್ವಲ್ಪ ಕಷ್ಟಕರವಾಗಬಹುದು. ಬೇರೆ ದೇಶದ ಪೌರತ್ವವನ್ನು ಪಡೆಯದ ಅನಿವಾಸಿಗಳಿಗೆ ಹೋಲಿಸಿದಾಗ, ಪೌರತ್ವ ಪಡೆದವರಿಗೆ ಕಾನೂನಾತ್ಮಕ ಪ್ರಕ್ರಿಯೆಗಳು ತುಸು ತ್ರಾಸದಾಯಕವಾಗಿವೆ.   

ಎನ್ಆರ್ಐಗಳಿಗೆ ಹಣವನ್ನು ಹೂಡಲು ಮ್ಯುಚುವಲ್ ಫಂಡ್ಸ್ ಬಹಳ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಕೇವಲ ಒಳ್ಳೆ ಲಾಭ  ಮಾತ್ರವಲ್ಲದೇ, ಅದು ಸಮರ್ಥವಾದ ಫಂಡ್ ಮ್ಯಾನೆಜರ್’ಗಳಿಂದ ನಿರ್ವಹಿಸಲ್ಪಡುತ್ತದೆ. ಹೂಡಿಕೆದಾರರ ಮುಂದೆ ಈಕ್ವಿಟಿ ಮ್ಯೂಚುವಲ್ ಫಂಡ್, ಬ್ಯಾಲೆನ್ಸಡ್ ಫಂಡ್ಸ್ ಹಾಗೂ ಡೆಬ್ಟ್ ಫಂಡ್ಸ್’ಗಳ ಆಯ್ಕೆಯಿರುತ್ತದೆ.

ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವುದರಿಂದ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್’ಗಳಲ್ಲಿ ರಿಸ್ಕ್ ಪ್ರಮಾಣ ಹೆಚ್ಚಿದೆ. ಈಕ್ವಿಟಿ ಮ್ಯೂಚುವಲ್ ಫಂಡ್’ಗೆ ಹೋಲಿಸಿದಾಗ  ಬ್ಯಾಲೆನ್ಸ್’ಡ್ ಮ್ಯೂಚುವಲ್ ಫಂಡ್ ಸಂತುಲಿತವಾಗಿರುತ್ತದೆ, ಏಕೆಂದರೆ ಇಲ್ಲಿ ಒಂದು ಭಾಗ ಹಣವನ್ನು ಈಕ್ವಿಟಿ ಮ್ಯೂಚುವಲ್ ಫಂಡ್’ನಲ್ಲೂ, ಇನ್ನೊಂದು ಭಾಗವನ್ನು ಡೆಬ್ಟ್ ಮ್ಯೂಚುವಲ್ ಫಂಡ್’ನಲ್ಲೂ ಹೂಡಲಾಗುತ್ತದೆ. ಡೆಬ್ಟ್ ಮ್ಯೂಚುವಲ್ ಫಂಡ್’ನಲ್ಲಿ ರಿಸ್ಕ್ ಪ್ರಮಾಣ ಇನ್ನೂ ಕಡಿಮೆಯಾಗಿರುತ್ತದೆ.

ಫಿಕ್ಸೆಡ್ ಡಿಪಾಸಿಟ್:

ಭಾರತಕ್ಕೆ ಹಿಂತಿರುಗುವ ಅನಿವಾಸಿ ಭಾರತೀಯರಿಗೆ ಫಿಕ್ಸೆಡ್ ಡಿಪಾಸಿಟ್ ಕೂಡಾ ಹೂಡಿಕೆಗೆ ಒಂದು ಉತ್ತಮ ಆಯ್ಕೆಯಾಗಿದೆ. ಭಾರತದಲ್ಲಿ ಬಡ್ಡಿ ದರ ಕೂಡಾ ಇತರ ಕಡೆಗಳಿಗಿಂತ ಹೆಚ್ಚಾಗಿದೆ. 

ಕಾರ್ಪೊರೇಟ್ ಬಾಂಡ್’ಗಳಲ್ಲಿ ನೆರವಾಗಿ ಹಣ ಹೂಡುವುದು ಕೂಡಾ ಒಳ್ಳೆಯ ಆಯ್ಕೆ.  ಪ್ರತಿಯೊಂದು ಬಾಂಡ್,  ರೇಟಿಂಗನ್ನು ಪಡೆಯಬೇಕಾಗುತ್ತದೆ. ಹೂಡಿಕೆದಾರರರಿಗೆ ಲಾಭಾಂಶವನ್ನು ವಾಪಾಸು ನೀಡುವ ಸಂಸ್ಥೆಯ ಸಾಮರ್ಥ್ಯವನ್ನಾಧರಿಸಿ ಬಾಂಡ್’ಗೆ ರೇಟಿಂಗನ್ನು ನೀಡಲಾಗುತ್ತದೆ. ಆದುದರಿಂದ ಬಾಂಡ್’ಗಳಲ್ಲಿ ಹಣವನ್ನು ಹೂಡುವ ಮುನ್ನ  ಆ ಸಂಸ್ಥೆಗಳಿಗೆ ರೇಟಿಂಗ್ ಏಜನ್ಸಿಗಳು ಕಳೆದ ಕೆಲವು ವರ್ಷಗಳಿಂದ ನೀಡಿರುವ ರೇಟಿಂಗ್’ಗಳನ್ನು ಪರಿಶೀಲಿಸಿ. ಉತ್ತಮ ರೇಟಿಂಗ್ ಇದ್ದಲ್ಲಿ ರಿಸ್ಕ್ ಕಡಿಮೆಯಿದೆ ಎಂದರ್ಥ    

ತೆರಿಗೆ ಪ್ಲಾನ್ ಹಾಗೂ ವಿವಿಧ ಹೂಡಿಕೆಗಳ ದರಗಳು:

ಭಾರತಕ್ಕೆ ವಾಪಸಾಗುವ ಅನಿವಾಸಿಗಳು ತೆರಿಗೆಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯ. ಇಲ್ಲಿ ಬೇರೆ ಬೇರೆ ಹೂಡಿಕೆಗಳಿಗೆ ಬೇರೆ ಬೇರೆ ತೆರಿಗೆ ದರಗಳು ಅನ್ವಯಿಸುತ್ತವೆ. ಚಾರ್ಟರ್ಡ್ ಅಕೌಂಟಂಟ್’ಗಳನ್ನು ಸಂಪರ್ಕಿಸಿ ತೆರಿಗೆ ದರಗಳ ಬಗ್ಗೆ ಸವಿವರವಾಗಿ ತಿಳಿಯಬಹುದಾಗಿದೆ. 

ಎರಡು ವಿಷಯಗಳನ್ನು-  ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ಸ್ (LTCG) ತೆರಿಗೆಗಳು  ಮತ್ತು ಶಾರ್ಟ್ ಟರ್ಮ್ ಲಾಂಗ್ ಟರ್ಮ್ ಗೈನ್ಸ್ (STCG) ತೆರಿಗೆಗಳು- ಅನಿವಾಸಿ ಭಾರತೀಯರು ತಿಳಿದರಿಬೇಕು.  ಇಂಡೆಕ್ಸೇಶನ್, ತೆರಿಗೆ ಲೆಕ್ಕಾಚಾರದ ಇನ್ನೊಂದು ಆಯಾಮವಾಗಿದೆ.

ಈಕ್ವಿಟೀಸ್ ಅಥವಾ  ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ಸ್’ಗಳಲ್ಲಿ LTCG ತೆರಿಗೆಗಳು ಶೂನ್ಯ. ಇಲ್ಲಿ ಲಾಂಗ್ ಟರ್ಮ್ ಎಂದರೆ ಒಂದು ವರ್ಷ ಅವಧಿಗಿಂತ ಹೆಚ್ಚು ಎಂದರ್ಥ. ಫಂಡನ್ನು ಒಂದು ವರ್ಷ ಅವಧಿಗಿಂತ ಮುಂಚೆಯೇ ಮಾರಾಟ ಮಾಡಿದ್ದಲ್ಲಿ STCG ತೆರಿಗೆ ಅನ್ವಯವಾಗುತ್ತದೆ. ಕ್ಯಾಪಿಟಲ್’ ಗೈನ್’ನ ಮೇಲೆ ಶೇ. 15ರಂತೆ ತರಿಗೆ ಅನ್ವಯವಾಗುತ್ತದೆ.

ಬಾಂಡ್ಸ್ ಮತ್ತು ಬಾಂಡ್ಸ್ ಮ್ಯುಚುವಲ್ ಫಂಡ್ಸ್’ಗಳಲ್ಲಿ STCGಯನ್ನು ಆದಾಯಕ್ಕೆ ಸೆರಿಸಲಾಗುತ್ತದೆ ಮತ್ತು ವೈಯುಕ್ತಿಕ ತೆರಿಗೆ ದರವನ್ನು ವಿಧಿಸಲಾಗುತ್ತದೆ. ಇಂಡೆಕ್ಸೇಶನ್ ಸೌಲಭ್ಯದೊಂದಿಗೆ ಶೇ.20 LTCG ತೆರಿಗೆಯನ್ನು ವಿಧಿಸಲಾಗುತ್ತದೆ. ಬಾಂಡ್ಸ್’ ವಿಷಯದಲ್ಲಿ LTCGಯ ಅವಧಿಯು 3 ವರ್ಷಗಳಾಗಿದೆ.

ರಿಯಲ್ ಎಸ್ಟೇಟ್’ನಲ್ಲಾದರೆ, ಪ್ರಾಪರ್ಟಿಯನ್ನು 2 ವರ್ಷಗಳ ಬಳಿಕ ಮಾರಾಟ ಮಾಡಿದರೆ LTCG ಅನ್ವಯವಾಗುತ್ತದೆ. ಇಂತಹ ಸಂದರ್ಭದಲ್ಲಿ LTCG ತೆರಿಗೆ ದರಗಳು, ಬಾಂಡ್’ಗಿರುವ ತೆರಿಗೆ ದರಗಳು ಒಂದೇ ಆಗಿವೆ. ಇಂಡೆಕ್ಸೇಶನ್ ಸೌಲಭ್ಯದೊಂದಿಗೆ ಶೇ.20 LTCG ತೆರಿಗೆಯನ್ನು ವಿಧಿಸಲಾದರೆ, STCGಯನ್ನು ಆದಾಯಕ್ಕೆ ಸೇರಿಸಿ ವೈಯುಕ್ತಿಕ ತೆರಿಗೆ ದರವನ್ನು ವಿಧಿಸಲಾಗುತ್ತದೆ. ಆನಿವಾಸಿಗಳಿಗಗಾದರೆ, STCG ಹಾಗೂ LTCG ಯನ್ನು ರಿಡಂಪ್ಶನ್ ಸಂದರ್ಭದಲ್ಲಿ ಕಡಿತಗೊಳಿಸಲಾಗುತ್ತದೆ.

ಮಾದರಿ ಪೋರ್ಟ್’ಫೋಲಿಯೋ:

ಮಾದರಿ ಪೋರ್ಟ್’ಫೋಲಿಯೋವು ವ್ಯಕ್ತಿಯ ಹೂಡಿಕೆ ಹಾಗೂ ರಿಸ್ಕ್ ಸಾಮರ್ಥ್ಯದ ಆಧಾರದ ಮೇಲೆ ಅವಲಂಬಿತವಾಗಿದೆ.  40+ ಅಥವಾ 50+ ಪ್ರಾಯದಲ್ಲಿ ಭಾರತಕ್ಕೆ ವಾಪಾಸಾಗುವ ಎನ್ಆರ್’ಐಗಳಿಗೆ  ಬಾಂಡ್ ಫಂಡ್ಸ್ ಹಾಗೂ ಬ್ಯಾಲೆನ್ಸ್ಡ್ ಫಂಡ್ಸ್’ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಏಕೆಂದರೆ ಅವುಗಳಲ್ಲಿ ಕಡಿಮೆ ರಿಸ್ಕ್ ಹಾಗೂ ಒಳ್ಳೆಯ ಲಾಭವಿರುತ್ತದೆ.

ರಿಯಲ್ ಎಸ್ಟೇಟ್ ಕೂಡಾ ಹೂಡಿಕೆಗೆ ಉತ್ತಮ ಆಯ್ಕೆ. ಆದರೆ ಇಲ್ಲಿ ಹಣ ಹೂಡುವ ಮುನ್ನ ಸರಿಯಾಗಿ ಅಧ್ಯಯನ ಮಾಡಿಕೊಳ್ಳಿ. ರಿಯಲ್ ಎಸ್ಟೇಟ್ ದರಗಳ ಬಗ್ಗೆ ತಿಳಿದುಕೊಳ್ಳಲು ಭಾರತದಲ್ಲಿರುವ ನಿಮ್ಮ ಸ್ನೇಹಿತರು ಅಥವಾ ನಂಬಲಾರ್ಹ ರಿಯಲ್ ಎಸ್ಟೆಟ್ ಏಜೆಂಟ್’ಗಳನ್ನು ಸಂಪರ್ಕಿಸಿ.

ಭಾರತದಲ್ಲಿ ಹಣ ಹೂಡುವ ಮುಂಚೆ ಸರಿಯಾಗಿ ವಿಷಯಗಳನ್ನು ತಿಳಿದುಕೊಳ್ಳಿ. ಯಾರಾದರೂ ವಿಶ್ವಾಸಾರ್ಹ ವ್ಯಕ್ತಿ/ಸಂಸ್ತೆಗಳ ಮೂಲಕ   ಹೂಡಿಕೆ, ಲಾಭ ಹಾಗೂ ತೆರಿಗೆ ಮುಂತಾದ ವಿಷಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಉತ್ತಮ.

-ಆಧಿಲ್ ಶೆಟ್ಟಿ. ಸಿಇಒ-ಬ್ಯಾಂಕ್ ಬಝಾರ್

(ಬ್ಯಾಂಕ್ ಬಝಾರ್ ಒಂದು ಆನ್ ಲೈನ್ ಮಾರುಕಟ್ಟೆಯಾಗಿದ್ದು, ಗ್ರಾಹಕರು ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ  ಮತ್ತು ವಿಮೆ ಮುಂತಾದವಗಳನ್ನು ಹೋಲಿಕೆ ಮಾಡಿ ಖರೀದಿಸಬಹುದಾಗಿದೆ.)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ