‘ವಚನ ಭ್ರಷ್ಟನಾಗಲಾರೆ’ ಇಂದೇ ವಿಶ್ವಾಸಮತ ಪ್ರಕ್ರಿಯೆ.. ಕೌಂಟ್ ಡೌನ್ ಶುರು

By Web DeskFirst Published Jul 22, 2019, 5:02 PM IST
Highlights

ಕಳೆದ 15 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ಇಂದು ತೆರೆ ಬೀಳುವ ಸಾಧ್ಯತೆಗಳು ನಿಚ್ಚಳವಾಗಿದೆ. ಇಂದೇ ದೋಸ್ತಿ ಸರ್ಕಾರ ವಿಶ್ವಾಸ ಮತ ಯಾಚನೆ  ಮಾಡುವುದು ಬಹುತೇಕ ಪಕ್ಕಾ ಆಗಿದೆ.

ಬೆಂಗಳೂರು[ಜು. 22] ನನ್ನನ್ನು ವಚನಭ್ರಷ್ಟ ಮಾಡಬೇಡಿ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದ್ದು ಇಂದೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಇನ್ನೊಂದು ಕಡೆ ಸರ್ಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಎಲ್ಲಾ ಶಾಸಕರು ಸದನಕ್ಕೆ 5 ಗಂಟೆಗೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹ ಬಿಜೆಪಿಯ ಎಲ್ಲ ಶಾಸಕರು ಹಾಜರಿರಬೇಕು ಎಂದು ಸೂಚನೆ ನೀಡಿದ್ದಾರೆ.

ಮಾತು ಉಳಿಸಿಕೊಳ್ಳುತ್ತೇನೆ ಎಂದಿರುವ ಸ್ಪೀಕರ್ ಮಾತಿನಂತೆ ಸಿಎಂ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಗೆ ಮುಂದಾಗುತ್ತಾರೋ ಅಥವಾ ಹಾಗೆಯೇ ರಾಜೀನಾಮೆ ನೀಡುತ್ತಾರೋ ಎಂಬ ಸ್ಥಿತಿ ಸದ್ಯದ ವಿಧಾನಸಭೆಯಲ್ಲಿದೆ. 20 ಶಾಸಕರು ಗೈರಾಗಿದ್ದರೆ.

click me!