ಫಿಲ್ಮ್‌ ಚೇಂಬರ್‌ಗೆ ಇಂದು ಚುನಾವಣೆ

Published : Jun 29, 2019, 08:39 AM IST
ಫಿಲ್ಮ್‌ ಚೇಂಬರ್‌ಗೆ  ಇಂದು ಚುನಾವಣೆ

ಸಾರಾಂಶ

ಫಿಲ್ಮ್‌ ಚೇಂಬರ್‌ ಗೆ ಇಂದು ಚುನಾವಣೆ | ಈಗಾಗಲೇ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದೆ | ಬೆಳಗ್ಗೆ 10.30ಕ್ಕೆ ಮತದಾನ ಪ್ರಕ್ರಿಯೆ

ಬೆಂಗಳೂರು (ಜೂ. 29): ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗ ಚುನಾವಣೆಯ ರಂಗು. ಈಗಾಗಲೇ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಆಗಿದ್ದು, ಉಳಿದ ಸ್ಥಾನಗಳಿಗೆ ಚುನಾವಣೆ ಮೂಲಕ ಪದಾಧಿಕಾರಿಗಳನ್ನು ಶನಿವಾರ ಆಯ್ಕೆ ಮಾಡಲಾಗುತ್ತದೆ.

ಚಿತ್ರರಂಗದ ಹಲವು ವಲಯಗಳಾದ ಪ್ರದರ್ಶಕರು, ನಿರ್ಮಾಪಕರು, ವಿತರಕರ ನಡುವೆ ಈ ಚುನಾವಣೆ ನಡೆಯುತ್ತಿದೆ. ಅಧ್ಯಕ್ಷರಾಗಿ ಟಿ.ಆರ್‌. ಜಯರಾಜ್‌, ಉಪಾಧ್ಯಕ್ಷರಾಗಿ ವೆಂಕಟರಮಣ ಬಾಬ್ಜಿ, ಕಾರ್ಯದರ್ಶಿಗಳಾಗಿ ಎ.ಗಣೇಶ್‌, ಎ.ನರಸಿಂಹಲು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಉಳಿದ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲೇ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ನಡೆಯಲಿದೆ. ಚುನಾವಣೆ ನಡೆದ ದಿನವೇ ಸಂಜೆ 6 ಗಂಟೆ ನಂತರ ಫಲಿತಾಂಶ ಪ್ರಕಟವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Fauda: 'ಫೌಡಾ' ನಟರ ಜೊತೆ ಪ್ರಧಾನಿ ಮೋದಿ ಸೆಲ್ಫಿ! ಫೋಟೋ ಸಖತ್ ವೈರಲ್
Operation Sindoor: ಆಪರೇಷನ್ ಸಿಂದೂರ್-2 ಇನ್ನೂ ಮುಗಿದಿಲ್ಲ, ಪಾಕಿಸ್ತಾನಕ್ಕೆ ಭಾರತದ ಖಡಕ್ ವಾರ್ನಿಂಗ್!