
ಡೆಹ್ರಾಡೂನ್ (ಡಿ,.27): ಸರ್ಕಾರದ ನೋಟು ಅಮಾನ್ಯ ಕ್ರಮವನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತನ್ನ ಹೋರಾಟವು ಕೇವಲ ಕಪ್ಪು-ಹಣದ ವಿರುದ್ಧವಾಗಿರದೇ, ಕಪ್ಪು-ಮನಸ್ಸುಗಳ ವಿರುದ್ಧವೂ ಆಗಿದೆ ಎಂದು ಹೇಳಿದ್ದಾರೆ.
ನನ್ನನ್ನು ಕೇವಲ ಪ್ರಧಾನಿಯಾಗಿ ನೀವು ಆಯ್ಕೆ ಮಾಡಿಲ್ಲ, ನಾನು ಈ ದೇಶದ ಕಾವಲಗಾರನೂ ಕೂಡಾ ಆಗಿದ್ದೇನೆ. ನಾನು ಸರಿಯಾಗಿ ಕೆಲಸಮಾಡುತ್ತಿರುವುದರಿಂದ ಕೆಲವರಿಗೆ ತೊಂದರೆಯಾಗುತ್ತಿದೆ ಎಂದು, ಪ್ರತಿಪಕ್ಷಗಳ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಡೆಹ್ರಾಡೂನ್’ನಲ್ಲಿ ಪರಿವರ್ತನಾರ್ಯಾಲಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನೋಟು ಅಮನ್ಯ ಕ್ರಮದ ಬಳಿಕ ಭಯೋತ್ಪಾದಕರು, ಮಾದಕ ವಸ್ತು ಹಾಗೂ ನಕಲಿ ನೋಟು ಸಾಗಣಿಕೆದಾರರ ಬೆನ್ನುಮೂಳೆ ಮುರಿದಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.