
ಹಾಸನ(ಡಿ.27): ಕಪ್ಪೆಯನ್ನು ಹಾವು ನುಂಗುವುದು ಸಾಮಾನ್ಯ. ಆದರೆ, ಹಾಸನದಲ್ಲಿ ಹಾವನ್ನೇ ಹಾವು ನುಂಗಿದ ಪ್ರಸಂಗ ನಡೆದಿದೆ. ಹಾಸನದ ಡೆಂಟಲ್ ಕಾಲೇಜು ಬಳಿ ಇರುವ ಮಂಜುನಾಥ್ ಎಂಬುವರರ ಮನೆ ಎದುರು ಹಾವು ಹಾವನ್ನೇ ನುಂಗಿದ ಪ್ರಸಂಗ ಬೆಳಕಿಗೆ ಬಂದಿದೆ.
ಮಂಜುನಾಥ್ ಮನೆ ಎದುರು ನಾಗರಹಾವೊಂದು ಕಾಣಿಸಿಕೊಂಡಿತು. ಕೂಡಲೇ ಮಂಜುನಾಥ್ ಹಾವು ಹಿಡಿಯುವ ಉರಗ ತಜ್ಞ ಶೇಷಪ್ಪ ಎಂಬುವರಿಗೆ ದೂರವಾಣಿ ಕರೆ ಮಾಡಿ ಸುದ್ದಿ ತಿಳಿಸಿದರು. ಶೇಷಪ್ಪ ಸ್ಥಳಕ್ಕೆ ಹೋಗಿ ನೋಡಿದಾಗ ನಾಗರ ಹಾವಿನ ಹೊಟ್ಟೆ ಉಬ್ಬಿತ್ತು. ನಂತರ ನಾಗರಹಾವನ್ನು ಬಯಲಿಗೆ ತಂದಾಗ ನುಂಗಿದ್ದ ಹಾವನ್ನು ಹೊರ ಹಾಕಿತು. ನಾಗರಹಾವು ಹೊರಹಾಕಿದ ಕೊಳಕುಮಂಡಲ ಹಾವು ಸತ್ತುಹೋಗಿತ್ತು. ಸುಮಾರು 15 ವರ್ಷದ ನಾಗರ ಹಾವು, ಕೊಳಕು ಮಂಡಲ ಹಾವನ್ನೇ ನುಂಗಿದ್ದ ವಿಷಯ ಗೊತ್ತಾದ ಮೇಲೆ ನೆರೆಹೊರೆಯವರು ಆ ದೃಶ್ಯಗಳನ್ನು ನೋಡಲು ಧಾವಿಸಿ ಬಂದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.