ಪ್ರಿಕ್ವಾರ್ಟರ್ ಪ್ರವೇಶಿಸಿದ ಅತಿಥೇಯ ರಷ್ಯಾ

First Published Jun 20, 2018, 10:21 AM IST
Highlights
  • ಪಂದ್ಯದ 47ನೇ ನಿಮಿಷದಲ್ಲಿ ರಷ್ಯಾದ  ಮಿಡ್‌ಫೀಲ್ಡರ್ ಜೋಬ್ನಿನ್
  • 59, 62 ನಿಮಿಷದಲ್ಲಿ ಮತ್ತೆರಡು ಗೋಲು
  • ಈಜಿಪ್ಟ್'ಗೆ 73ನೇ ನಿಮಿಷದಲ್ಲಿ ಗೋಲು  

ಸೇಂಟ್ ಪೀಟರ್ಸ್‌ಬರ್ಗ್[ಜೂ.20]: ಆತಿಥೇಯ ರಷ್ಯಾ ಈ ವಿಶ್ವಕಪ್‌ನ ಪ್ರಿಕ್ವಾರ್ಟರ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಮಂಗಳವಾರ ರಾತ್ರಿ ನಡೆದ ಚೊಚ್ಚಲ ವಿಶ್ವಕಪ್ ಮುಖಾಮುಖಿಯಲ್ಲಿ ಈಜಿಪ್ಟ್ ತಂಡವನ್ನು  3-1ರಿಂದ ಮಣಿಸಿ ಆತಿಥೇಯ ರಷ್ಯಾ, ಅಂತಿಮ 16ರ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಈಜಿಪ್ಟ್  ಡೆಪೆಂಡರ್ ಅಹ್ಮದ್ ಫ್ಯಾತಿ ಯಡವಟ್ಟಿನಿಂದ ದಾಖಲಾದ ಸ್ವಯಂ ಗೋಲಿನಿಂದ ಮುನ್ನಡೆ ಪಡೆದ ನಂತರ ಹಿಂತಿರುಗಿ ನೋಡಲಿಲ್ಲ. ಬಳಿಕ  ರಷ್ಯಾ ಗೋಲಿನ ಓಟನವನ್ನು ಈಜಿಪ್ಟ್‌ಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈಜಿಪ್ಟ್ ಟೂರ್ನಿಯಲ್ಲಿ 5ನೇ ಸ್ವಯಂ ಗೋಲು ದಾಖಲಿಸಿತು .

ರಷ್ಯಾ ಪರವಾಗಿ  ಡೆನಿಸ್ ಚೆರಿಶೇವ್ ಮತ್ತು ಆರ್ಟೆಮ್ ಡಿಜ್ಯುಬಾ ತಲಾ ಒಂದು ಗೋಲು ದಾಖಲಿಸಿದರು.  ಪಂದ್ಯದ 47ನೇ ನಿಮಿಷದಲ್ಲಿ ರಷ್ಯಾ  ಮಿಡ್‌ಫೀಲ್ಡರ್ ಜೋಬ್ನಿನ್ ಬಾರಿಸಿದ ಚೆಂಡು, ಈಜಿಪ್ಟ್‌ನ ಅಹ್ಮದ್ ಫ್ಯಾತಿ ಕಾಲಿಗೆ ಬಡಿದು ಗೋಲ್‌ಪೋಸ್ಟ್‌ನ ಬಲಗಡೆಯಿಂದ ತೂರಿಕೊಂಡಿತು. ಈ ಗೋಲಿನಿಂದ ರಷ್ಯಾ 1-0 ಮುನ್ನಡೆ ಹೊಂದಿತು. ಬಳಿಕ 59ನೇ ನಿಮಿಷದಲ್ಲಿ ಡೆನಿಸ್ ಮತ್ತು 62ನೇ ನಿಮಿಷದಲ್ಲಿ ಆರ್ಟೆಮ್ ಡಿಜ್ಯುಬಾಗೋಲು ಗಳಿಸಿ  3-0 ಮುನ್ನಡೆ ಪಡೆಯಿತು. 73ನೇ  ನಿಮಿಷದ ಪೆನಾಲ್ಟಿಯಲ್ಲಿ ಈಜಿಪ್ಟ್ ಒಂದು ಗೋಲು ದಾಖಲಿಸಿ ಸೋಲಿನ ಅಂತರ ತಗ್ಗಿಸಿಕೊಂಡಿತು.

 

click me!