ವಿದ್ಯಾರ್ಥಿನಿ ಒಳಉಡುಪು ತೆಗೆಸಿ ಪರೀಕ್ಷೆಗೆ ಬಿಟ್ಟರು

By Suvarna Web DeskFirst Published May 7, 2017, 5:58 PM IST
Highlights

ಇನ್ನು ವಿದ್ಯಾರ್ಥಿನಿಯೊಬ್ಬಳ ಜೀನ್ಸ್ ಕಿಸೆಗೆ ಮೆಟಲ್ ಬಟನ್‌ಗಳು ಇದ್ದ ಕಾರಣ ಆ ಕಿಸೆಯನ್ನೇ ಕಿತ್ಹಾಕು ಎಂದು ಮೇಲ್ವಿಚಾರಕರು ಸೂಚಿಸಿದರು. ವಿಯಿಲ್ಲದೆೇ ಇನ್ನೊಂದು ಉಡುಪನ್ನು 3 ಕಿ.ಮೀ. ದೂರದಿಂದ ಆಕೆಯ ತಂದೆ ದಂದುಕೊಟ್ಟರು. ಮತ್ತೊಬ್ಬ ವಿದ್ಯಾರ್ಥಿನಿಗೆ ಆಕೆಯ ಪೋಷಕರು 6 ಡ್ರೆಸ್ ತಂದುಕೊಟ್ಟರೂ ಅದನ್ನು ಅಧಿಕಾರಿಗಳು ಒಪ್ಪಲಿಲ್ಲ. ಕೊನೆಗೆ ಅದರ ತೋಳನ್ನು ಕತ್ತರಿಸಿದ ಬಳಿಕವಷ್ಟೇ ಪರೀಕ್ಷೆಗೆ ಒಳಗೆ ಬಿಟ್ಟರು.

ನವದೆಹಲಿ(ಮೇ.07): ನಕಲು ತಡೆಯಲೆಂದು ನೀಟ್ ಪರೀಕ್ಷೆಯಲ್ಲಿ ಸಿಬಿಎಸ್‌ಇ ಅಳವಡಿಸಿದ ಕಠಿಣ ನಿಯಮಗಳು ಪರೀಕ್ಷಾರ್ಥಿಗಳಿಗೆ ಸಾಕಷ್ಟು ಕಿರಿಕಿರಿ ಸೃಷ್ಟಿಸಿ ಆಕ್ರೋಶ ಸೃಷ್ಟಿಯಾದ ಘಟನೆಗಳು ಅನೇಕ ಕಡೆ ನಡೆದಿವೆ.

ಕೇರಳದ ಕಣ್ಣೂರಿನಲ್ಲಿ ಓರ್ವ ವಿದ್ಯಾರ್ಥಿನಿಯ ‘ಮೇಲಿನ ಒಳಉಡುಪು’ತೆಗೆಯಿರಿ ಎಂದು ಪರೀಕ್ಷಾ ಮೇಲ್ವಿಚಾರಕರು ಪಟ್ಟು ಹಿಡಿದರು. ಕೆಲ ಕ್ಷಣ ಆಘಾತಕ್ಕೊಳಗಾದ ಆ ವಿದ್ಯಾರ್ಥಿನಿ ಅನಿವಾರ್ಯವಾಗಿ ಆ ಉಡುಪು ತೆಗೆದು, ಹೊರಗೆ ನಿಂತಿದ್ದ ತಾಯಿಯ ಕೈಗೆ ಕೊಟ್ಟು ಹೋದಳು.

ಇನ್ನು ವಿದ್ಯಾರ್ಥಿನಿಯೊಬ್ಬಳ ಜೀನ್ಸ್ ಕಿಸೆಗೆ ಮೆಟಲ್ ಬಟನ್‌ಗಳು ಇದ್ದ ಕಾರಣ ಆ ಕಿಸೆಯನ್ನೇ ಕಿತ್ಹಾಕು ಎಂದು ಮೇಲ್ವಿಚಾರಕರು ಸೂಚಿಸಿದರು. ವಿಯಿಲ್ಲದೆೇ ಇನ್ನೊಂದು ಉಡುಪನ್ನು 3 ಕಿ.ಮೀ. ದೂರದಿಂದ ಆಕೆಯ ತಂದೆ ದಂದುಕೊಟ್ಟರು. ಮತ್ತೊಬ್ಬ ವಿದ್ಯಾರ್ಥಿನಿಗೆ ಆಕೆಯ ಪೋಷಕರು 6 ಡ್ರೆಸ್ ತಂದುಕೊಟ್ಟರೂ ಅದನ್ನು ಅಧಿಕಾರಿಗಳು ಒಪ್ಪಲಿಲ್ಲ. ಕೊನೆಗೆ ಅದರ ತೋಳನ್ನು ಕತ್ತರಿಸಿದ ಬಳಿಕವಷ್ಟೇ ಪರೀಕ್ಷೆಗೆ ಒಳಗೆ ಬಿಟ್ಟರು.

ಅನೇಕ ಕಡೆ ಕಿವಿಯೋಲೆ ತೆಗೆಸಿದ, ಉದ್ದ ತೋಳಿನ ಅಂಗಿಯನ್ನು ಅರ್ಧಕ್ಕೆ ಕತ್ತರಿಸಿದ ಪ್ರಸಂಗಗಳೂ ನಡೆದವು. ಪರೀಕ್ಷಾ ಕೇಂದ್ರಗಳ ಸುತ್ತಲಿದ್ದ ಮನೆಗಳವರು ಅನೇಕ ಪರೀಕ್ಷಾರ್ಥಿಗಳಿಗೆ ತಮ್ಮ ಬಳಿಯ ಬದಲಿ ಉಡುಪು ನೀಡಿ ಮಾನವೀಯತೆ ಮೆರೆದರು.

click me!