
ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಸ್ಥಾಪಿಸಿರುವ ‘ರಾಷ್ಟ್ರ ಮಂಚ್’ ಜೊತೆ ಗುರುತಿಸಿಕೊಂಡಿರುವ ಚಿತ್ರನಟ ಹಾಗೂ ಸಂಸದ ಶತ್ರುಘ್ನ ಸಿನ್ಹಾ, ಬಿಜೆಪಿಯು ತನ್ನೊಂದಿಗೆ ಮಲಮಗನಂತೆ ಕಂಡಿದೆ ಎಂದು ನೋವನ್ನು ತೋಡಿಕೊಂಡಿದ್ದಾರೆ.
ಐಎಎನ್ಎಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ನನಗೆ ಪಕ್ಷದಲ್ಲಿ ಯಾವುದೇ ಹೊಣೆಗಾರಿಕೆಯನ್ನು ವಹಿಸಲಾಗಿಲ್ಲ, ಮಾತನಾಡುವ ಹೊರತು ನನಗೆ ಯಾವುದೇ ಕೆಲಸವನ್ನು ಮಾಡಲು ಬಿಡಲಿಲ್ಲ, ಎಂದು ಸಿನ್ಹಾ ಹೇಳಿದ್ದಾರೆ.
ರಾಷ್ಟ್ರಮಂಚ್ ಬಗ್ಗೆ ಮಾತನಾಡಿದ ಅವರು, ಹೊಸ ವೇದಿಕೆಯ ಹುಟ್ಟು ಮಾತೃಪಕ್ಷದೊಂದಿಗಿನ ಬಂಡಾಯವಲ್ಲವೆಂದು ಸ್ಪಷ್ಟೀಕರಿಸಿದ್ದಾರೆ. ಹೊಸ ವೇದಿಕೆಯು ನಿರುದ್ಯೋಗ, ರೈತರ ಆತ್ಮಹತ್ಯೆ ಹಾಗೂ ಆಂತರಿಕ ಭದ್ರತೆ ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ಗಮನಹರಿಸುವುದು ಎಂದು ಹೇಳಿದ್ದಾರೆ.
ಪ್ರಮುಖ ವಿಚಾರಗಳಿಂದ ಗಮನ ಬೇರೆಡೆ ಹರಿಸಲು ಅನಗತ್ಯ ವಿಷಯಗಳನ್ನು ಕೆದಕಲಾಗುತ್ತಿದೆ ಎಂದಿರುವ ಸಿನ್ಹಾ, ಪದ್ಮಾವತ್ ಚಿತ್ರದ ಉದಾಹರಣೆಯನ್ನು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.