
ಮುಜಾಫರಾನಗರ್ : ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿ ವಿವಿಧ ರೀತಿಯಾಗಿ ಬರೆಯುವುದನ್ನು ಕೇಳಿದ್ದೇವೆ. ದಯವಿಟ್ಟು ಪಾಸ್ ಮಾಡಿ ಎನ್ನುವುದು, ಹಣವನ್ನು ಇರಿಸುವುದನ್ನು ಕೇಳಿದ್ದೇವೆ.
ಆದರೆ ಇಲ್ಲೊಂದು ಪ್ರಕರಣ ಸಂಪೂರ್ಣ ವಿಭಿನ್ನವಾಗಿದೆ. ಉತ್ತರ ಪ್ರದೇಶದ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯೋರ್ವ ತಾನು ಲವ್ವಲ್ಲಿ ಬಿದ್ದ ಕಾರಣಕ್ಕೆ ಪರೀಕ್ಷೆಯನ್ನು ಉತ್ತಮವಾಗಿ ಮಾಡಲು ಆಗಲಿಲ್ಲ ಎಂದು ಬರೆದಿದ್ದಾನೆ.
ಈ ಪ್ರೀತಿ ಎನ್ನುವುದು ಹೀಗೆ ಸಾಯಲು - ಬದುಕಲು ಬಿಡುವುದಿಲ್ಲ. ಲವ್ವಲ್ಲಿ ಬಿದ್ದ ಕಾರಣದಿಂದ ನಾನು ಓದಲು ಆಗಲಿಲ್ಲ. ಆದ್ದರಿಂದ ಪರೀಕ್ಷೆಯನ್ನು ಉತ್ತಮವಾಗಿ ಮಾಡಿಲ್ಲ ಎಂದು ಬರೆದಿದ್ದಾರೆ.
ಅಲ್ಲದೇ ಪ್ರಶ್ನೆ ಪತ್ರಿಕೆಯಲ್ಲಿ ಐ ಲವ್ ಮೈ ಪೂಜಾ ಎಂದೂ ಕೂಡ ಬರೆದಿದ್ದಾರೆ. ಹೃದಯದ ಚಿತ್ರವನ್ನು ಬಿಡಿಸಿ ಅದರಲ್ಲಿ ಪೂಜಾ ಎಂದು ವಿದ್ಯಾರ್ಥಿ ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.