
ತಂದೆಯು ತನ್ನ ಮಗು ಆಡುವಾಗ, ಓಡುವಾಗ ಬೀಳದಂತೆ ರಕ್ಷಿಸುವ ವಿಡಿಯೋಗಳು ಸಾಮಾನ್ಯವಾಗಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತವೆ. ಆದರೆ ಇಲ್ಲೊಬ್ಬ ತಂದೆ ಫುಟ್ಬಾಲ್ ಗೋಲ್ ತಡೆಯಲು ತನ್ನ ಮಗನನ್ನು ದೂಡಿ ಹಾಕಿರುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.
ಹೌದು ಯುಕೆಯಲ್ಲಿ ತಂದೆಯೊಬ್ಬ ಫುಟ್ಬಾಲ್ ಗೋಲ್ ತಡೆಯುವ ಧಾವಂತದಲ್ಲಿ ನಿಂತುಕೊಂಡಿದ್ದ ತನ್ನ ಮಗನನ್ನೇ ದೂಡಿ ಹಾಕಿದ್ದಾರೆ. ಟ್ವಿಟರ್ ನಲ್ಲಿ ಈ ವಿಡಿಯೋವನ್ನು 23 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕೆಲವರು ತಂದೆಯನ್ನು 'ಫಾದರ್ ಆಫ್ ದ ಇಯರ್' ಎಂದು ಬಣ್ಣಿಸಿದ್ದಾರೆ. ಕ್ರಿಸ್ ವಿಲ್ಕಿನ್ ಎಂಬವರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ವೇಲ್ಸ್ ನಲ್ಲಿ ನಡೆಯುತ್ತಿರುವ ಜ್ಯೂನಿಯರ್ ಲೀಗ್ ಗೇಮ್ ನಲ್ಲಿ ಇದು ನಡೆದಿರುವುದಾಗಿ ತಿಳಿದು ಬಂದಿದೆ.
ಜರ್ಸಿ ತೊಟ್ಟಿರುವ ಮಕ್ಕಳು ಫುಟ್ಬಾಲ್ ಆಡುತ್ತಿದ್ದು, ಗೋಲ್ ಪೋಸ್ಟ್ ಬಳಿ ಗೋಲ್ ಕೀಪಿಂಗ್ ಮಾಡುತ್ತಿದ್ದ ಬಾಲಕನ ತಂದೆ ನಿಂತಿದ್ದರು. ಅತ್ತ ಫುಟ್ಬಾಲ್ ಸಮೀಪ ಬರುತ್ತಿದ್ದಂತೆಯೇ ತಂದೆ ತನ್ನ ಮಗನನ್ನು ದೂಡಿ ಹಾಕಿ ಗೋಲ್ ತಡೆದಿದ್ದಾರೆ. ಆದರೆ ಮರುಕ್ಷಣವೇ ಮತ್ತೊಮ್ಮೆ ಕಿಕ್ ಮಾಡಿದ್ದರಿಂದ ಗೋಲ್ ಆಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗಮನಿಸಬಹುದು. ಹೀಗಿದ್ದರೂ ತಂದೆ ತನ್ನ ಮಗನನ್ನು ದೂಡಿ ಹಾಕಿದ ಶೖಲಿ ಜನರಿಗೆ ಬಹಳಷ್ಟು ಇಷ್ಟವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ