ಮಗಳಿಗಾಗಿ ಹಿಂದೂ ಯುವಕನನ್ನು ಅಪಹರಿಸಿ ಮುಸ್ಲಿಂ ಪದ್ಧತಿಯಂತೆ ಮುಂಜಿ, ಮತಾಂತರ ಮಾಡಿದ ತಂದೆ?

Published : Jun 08, 2017, 09:04 AM ISTUpdated : Apr 11, 2018, 12:55 PM IST
ಮಗಳಿಗಾಗಿ ಹಿಂದೂ ಯುವಕನನ್ನು ಅಪಹರಿಸಿ ಮುಸ್ಲಿಂ ಪದ್ಧತಿಯಂತೆ ಮುಂಜಿ, ಮತಾಂತರ ಮಾಡಿದ ತಂದೆ?

ಸಾರಾಂಶ

ತನ್ನ ಮಗಳಿಗೆ ಮದುವೆ ಮಾಡಬೇಕು ಹಿಂದೂ ಹುಡಗನೊಬ್ಬನನ್ನು ಅಪಹರಿಸಿದ ಯುವತಿಯ ತಂದೆ, ಆತನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಆದರೆ ತನ್ನ ಮಗ ಇನ್ನೂ ವಯಸ್ಕ, ಆತನನ್ನು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ ಎಂದು ಹುಡುಗನ ಪೋಷಕರು ಆರೋಪಿಸಿದ್ದಾರೆ.

ಮಂಡ್ಯ(ಜೂ.08): ತನ್ನ ಮಗಳಿಗೆ ಮದುವೆ ಮಾಡಬೇಕು ಹಿಂದೂ ಹುಡಗನೊಬ್ಬನನ್ನು ಅಪಹರಿಸಿದ ಯುವತಿಯ ತಂದೆ, ಆತನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಆದರೆ ತನ್ನ ಮಗ ಇನ್ನೂ ವಯಸ್ಕ, ಆತನನ್ನು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ ಎಂದು ಹುಡುಗನ ಪೋಷಕರು ಆರೋಪಿಸಿದ್ದಾರೆ.

ತನ್ನ ಮಗಳಿಗೆ ಮದುವೆ ಮಾಡಲೇಬೇಕಂತ ಹಟ ತೊಟ್ಟ ಮುಸ್ಲಿಂ ಮುಖಂಡನೊಬ್ಬ, ಹಿಂದು ಜಾತಿಯ ಹುಡುಗನನ್ನು ಅಪರಿಹರಿಸಿ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ  ಮಂತಾರಗೊಳಿಸಿ ಮದುವೆ ಮಾಡಲು ಪ್ರಯತ್ನಿಸ್ತಿದ್ದಾನಂತೆ. ಹೀಗಂತ ಆತಂಕಗೊಂಡ ಹುಡುಗನ ಪೋಷಕರು ಹಿಂದೂಪರ ಸಂಘಟನೆಗಳು ಮಂಡ್ಯ ಜಿಲ್ಲೆಯ ಪಾಂಡವಪುರ ಠಾಣೆ ಮೆಟ್ಟಿ ಲೇರಿದ್ದಾರೆ. ಮದುವೆ ತಡೆಯಿರಿ ಎಂದು ಅಲವತ್ತುಕೊಂಡಿದ್ದಾರೆ. ಮಗ ಕೈತಪ್ಪಿ ಹೋಗುತ್ತಾನೆ ಮತಾಂತರವಾಗಿ ಬಿಡುತ್ತಾನೆ ಎಂದು ಕಣ್ಣೀರಿಡುತ್ತಿದ್ದಾರೆ.

ಹಿಂದೂ ಧರ್ಮದ ಶ್ರೀನಿವಾಸ್ ಎಂಬಾತನ ಮಗ ಚಂದನ್​ಗೆ ಬಲವಂತವಾಗಿ  ಮುಸ್ಲಿಂ ಮುಖಂಡ ಯೂಸೂಫ್ ಎಂಬಾತ ತನ್ನ ಮಗಳಿಗೆ ಮದುವೆ ಮಾಡಲು ಹೊರಟಿದ್ದಾರಂತೆ. ಚಂದನ್'​ಗೆ ಇನ್ನೂ 19 ವರ್ಷವಷ್ಟೇ ಜೊತೆಗೆ ಮಗನನ್ನು ಅಪಹರಿಸಿ ಮದುವೆ ಮಾಡಲು ಹೊರಟಿದ್ದಾರೆ. ಇದು ಕಾನೂನು ಬಾಹಿರ ಎನ್ನುವುದು ಚಂದನ್ ತಂದೆ ಆರೋಪ. ಇನ್ನೂ ಹಿಂದೂ ಯುವಕರನ್ನ ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದೆ ಎನ್ನುವುದು ಹಿಂದೂ ಸಂಘಟನೆ ಮುಖಂಡರ ವಾದ.

ಇನ್ನೂ ಯುಸೂಫ್ ತನ್ನ ಮಗಳೊಡನೆ ಮದುವೆ ಮಾಡಲು ಚಂದನ್'​ಗೆ ಬಲವಂತವಾಗಿ ಮುಂಜಿ ಮಾಡಿಸಿದ್ದಾನಂತೆ. ಇವರು ಹೇಳಿದ ಮಾತ್ರಕ್ಕೆ ಎಲ್ಲವೂ ಸರಿ ಎಂದು ನಂಬಲು ಸಾಧ್ಯವಿಲ್ಲ, ತಪ್ಪು ಎಂದು ತಳ್ಳಿಹಾಕುವಂತೆಯೂ ಇಲ್ಲ. ಇದೆಲ್ಲದರ ಹಿಂದಿರೋ ಅಸಲಿ ಕಾರಣ ಏನು ಎನ್ನುವುದನ್ನು ಪಾಂಡವಪುರ ಪೊಲೀಸರೇ ಪತ್ತೆಹಚ್ಚಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?