ದಿಢೀರ್ ಉಪಚುನಾವಣಾ ಘೋಷಣೆ ಅನರ್ಹ ಶಾಸಕರ ನಿದ್ದೆಗೆಡಿಸಿದ್ದು, ಸೋಮವಾರ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ಅನರ್ಹರ ಭವಿಷ್ಯ ನಿರ್ಧಾರವಾಗಲಿದೆ. ಹಾಗಾದ್ರೆ ಕೋರ್ಟ್ ನಲ್ಲಿ ಏನೆಲ್ಲ ಆಗ್ಬಹುದು? ಇಲ್ಲಿದೆ ವಿಶ್ಲೇಷಣೆ
ಬೆಂಗಳೂರು/ನವದೆಹಲಿ, [ಸೆ. 22]: ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿಯಲ್ಲಿ ಅನರ್ಹಗೊಂಡ 17 ಶಾಸಕರ ಭವಿಷ್ಯ ಸೋಮವಾರ [ಸೆ. 23] ನಿರ್ಧಾರವಾಗಲಿದೆ.
ಸ್ಪೀಕರ್ ಅನರ್ಹ ಆದೇಶ ಪ್ರಶ್ನಿಸಿ ಕಾಂಗ್ರೆಸ್- ಜೆಡಿಎಸ್ ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ. ಹಿನ್ನೆಲೆಯಲ್ಲಿ ಶಾಸಕರ ಭವಿಷ್ಯ ಏನಾಗುತ್ತದೆ ಎಂಬ ಕುತೂಹಲ ಮೂಡಿಸಿದೆ.
undefined
ಸೆ.23 ನಿರ್ಣಾಯಕ ದಿನ: ಅನರ್ಹ ಶಾಸಕರ ಮುಂದಿರುವುದು ಎರಡೇ ಎರಡು ದಾರಿಗಳು..!
ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ 17 ಶಾಸಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಿಂಗಳು ಕಳೆದಿವೆ. ಆದರೆ ಅರ್ಜಿ ವಿಚಾರಣೆ ಪ್ರತಿಬಾರಿಯೂ ಮುಂದೂದಲ್ಪಡುತ್ತಿತ್ತು.
ಶಾಸಕರು ತುರ್ತು ವಿಚಾರಣೆಗೆ ಮನವಿ ಮಾಡಿದ್ದರೂ ನ್ಯಾಯಾಲಯ ಸ್ಪಂದಿಸಿರಲಿಲ್ಲ. ಇದರ ಮಧ್ಯೆ ದಿಢೀರ್ ಉಪಚುನಾವಣೆ ಘೋಷಣೆಯಾಗಿದ್ದು, ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಾಗಿಲ್ಲ. ಇದ್ರಿಂದ ಅನರ್ಹ ಶಾಸಕರಿಗೆ ದಿಕ್ಕುತೋಚದಂತಾಗಿದೆ.
ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ
ಅನರ್ಹ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಾಡಲಿದ್ದು, ಮೊದಲು ಚುನಾವಣೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇನ್ನು ಸ್ಪೀಕರ್ ಆದೇಶಕ್ಕೆ ತಡೆ ನೀಡುವಂತೆಯೂ ಮನವಿ ಮಾಡಿಕೊಳ್ಳಬಹುದು.
ಸುಪ್ರೀನಲ್ಲಿ ಏನಾಗ್ಬಹುದು..?
ಸೋಮವಾರ ಅನರ್ಹ ಶಾಸಕರ ಪರ ಮತ್ತು ಜೆಡಿಎಸ್-ಕಾಂಗ್ರೆಸ್ ಪರ ವಕೀಲರ ವಾದ-ಪ್ರತಿವಾದವನ್ನು ಸುಪ್ರೀಂ ಕೋರ್ಟ್ ಆಲಿಸಿ, ಅನರ್ಹರು ಎಂದು ತೀರ್ಪು ನೀಡಬಹುದು, ಇಲ್ಲ ಅರ್ಹರು ಎಂದೂ ಹೇಳಬಹುದು. ಅಷ್ಟೇ ಅಲ್ಲದೇ ವಿಚಾರಣೆ ಅಥವಾ ತೀರ್ಪನ್ನು ಮುಂದೂಡಲೂಬಹುದು.
ಬೈ ಎಲೆಕ್ಷನ್‌ಗೆ ಅನರ್ಹರು ಸ್ಪರ್ಧಿಸಲು ಅವಕಾಶ ಇದ್ಯಾ? ಇಲ್ಲ?: ಸಂಪೂರ್ಣ ಮಾಹಿತಿ
ಒಂದು ವೇಳೆ ಕೋರ್ಟ್ ವಿಚಾರಣೆ ಅಥವಾ ತೀರ್ಪು ಮುಂದೂಡಿದರೆ ಅನರ್ಹರ ಎದೆಯಲ್ಲಿ ಢವ ಢವ ಶುರುವಾಗುತ್ತೆ. ಯಾಕಂದ್ರೆ ಸೆ.30 ನಾಮಪತ್ರ ಸಲ್ಲಿಸಲು ಕೊನೆ ದಿನಾವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರವೇ ತೀರ್ಪು ನೀಡಬೇಕೆಂದು ಕೋರ್ಟ್ ಗೆ ಅನರ್ಹ ಶಾಸಕರ ಪರ ವಕೀಲ ಮನವಿ ಮಾಡಲೇಬೇಕು, ಮಾಡೇ ಮಾಡ್ತಾರೆ .
ತೀರ್ಪಿನ ಮೇಲೆ ಅನರ್ಹರ ಭವಿಷ್ಯ
1. ಹೌದು..ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿಂತಿದೆ. ಒಂದು ವೇಳೆ ಸ್ಪೀಕರ್ ನೀಡಿರುವ ಆದೇಶವನ್ನು ಸುಪ್ರೀಂ ಎತ್ತಿಹಿಡಿದರೆ, ಅನರ್ಹ ಶಾಸಕರ ರಾಜಕೀಯ ಜೀವನ ಮುಗಿದಂತೆ. ಯಾಕಂದ್ರೆ ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆ ವರೆಗೂ ಎಲೆಕ್ಷನ್ ಗೆ ಸ್ಪರ್ಧೆ ಮಾಡುವಂತಿಲ್ಲ.
2. ಇನ್ನು 2ನೇ ಅಂಶ ನೋಡುವುದಾದ್ರೆ ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶವನ್ನು ವಜಾ ಮಾಡಿದರೆ ಅನರ್ಹರು ಎಲ್ಲರೂ ಅರ್ಹರಾಗುತ್ತಾರೆ. ಅಂದ್ರೆ ಶಾಸಕರಾಗಿ ಉಳಿಯಲಿದ್ದಾರೆ. ಆಗ ಕೇಂದ್ರ ಚುನಾವಣೆ ಆಯೊಗ ಘೋಷಿಸಿರುವ 15 ಕ್ಷೇತ್ರಗಳಿಗೆ ಉಪಚುನಾವಣೆ ರದ್ದಾಗುತ್ತದೆ. ಒಂದು ವೇಳೆ ಈ ತೀರ್ಪು ಏನಾದರೂ ಬಂದರೆ ಅನರ್ಹರಿಗೆ ಮರುಜೀವಬಂದಂತಾಗುತ್ತದೆ.
3. ಅನರ್ಹರ ವಿಚಾರಣೆ ಅಥವಾ ತೀರ್ಪನ್ನು ಕೋರ್ಟ್ ಮುಂದೂಡಿದರೇ ಅನರ್ಹರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಯಾಕಂದ್ರೆ ಸೆ.23ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆ.30 ನಾಮಪತ್ರ ಸಲ್ಲಿಸಲು ಕೊನೆಯಾಗಿದೆ. ಒಂದು ವೇಳೆ ವಿಚಾರಣೆ ಇಲ್ಲ ತೀರ್ಪು ಸೆ.30ರ ನಂತರ ಮುಂದೂಡಿದರೆ ಅಲ್ಲಿಗೆ ಅನರ್ಹರ ರಾಜಕೀಯ ಭವಿಷ್ಯಕ್ಕೆ ಕತ್ತರಿ ಬಿದ್ದಂತಾಗುತ್ತದೆ.
ಒಟ್ಟಿನಲ್ಲಿ ದಿಢೀರ್ ಚುನಾವಣಾ ಘೋಷಣೆ ಅನರ್ಹ ಶಾಸಕರ ನಿದ್ದೆಗೆಡಿಸಿದ್ದು, ಸೋಮವಾರ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ಅನರ್ಹರ ಭವಿಷ್ಯ ನಿರ್ಧಾರವಾಗಲಿದೆ.