‘ಭಾರತದಲ್ಲಿ ವಾಸಿಸುವ ಮುಸ್ಲಿಮರು ಅದೃಷ್ಟಶಾಲಿಗಳು'

By Web DeskFirst Published Sep 22, 2019, 7:26 PM IST
Highlights

ಭಾರತದಲ್ಲಿ ವಾಸಿಸುವ ಮುಸ್ಲಿಮರು ಉಳಿದ ಇಸ್ಲಾಮಿಕ್ ರಾಷ್ಟ್ರದಲ್ಲಿ ವಾಸಿಸುವ ಮುಸ್ಲಿಮರಿಗಿಂತ ಅದೃಷ್ಟಶಾಲಿಗಳು/ ಅಭಿಪ್ರಾಯ ಮಂಢಿಸಿದ ಹಿರಿಯ ಪತ್ರಕರ್ತ/ ಹೇಳಿಕೆಗೆ ಆಧಾರವನ್ನು ನೀಡಿದ ಜರ್ನಲಿಸ್ಟ್

ನವದೆಹಲಿ[ಸೆ. 22]  'ಭಾರತದಲ್ಲಿ ವಾಸಿಸುವ ಮುಸ್ಲಿಮರು ಉಳಿದ ಇಸ್ಲಾಮಿಕ್ ರಾಷ್ಟ್ರದಲ್ಲಿ ವಾಸಿಸುವ ಮುಸ್ಲಿಮರಿಗಿಂತ ಅದೃಷ್ಟಶಾಲಿಗಳು' ಹೀಗೇಂದು ಹೇಳಿಕೆ ಕೊಟ್ಟಿದ್ದು ಹಿರಿಯ ಪತ್ರಕರ್ತ ಮಾರ್ಕ್ ಟುಲ್ಲಿ.

ತಮ್ಮ ಹೇಳಿಕೆಯನ್ನು ಮಾರ್ಕ್ ಉದಾಹರಣೆ ಸಮೇತ ಹೇಳುವ ಪ್ರಯತ್ನ ಮಾಡಿದ್ದಾರೆ. ದೆಹಲಿಯ ನಿಜಾಮುದ್ದೀನ್ ಏರಿಯಾದಲ್ಲಿ ಆದ ಘಟನಾವಳಿಯೊಂದನ್ನು ಹೇಳಿದ್ದಾರೆ.

ಮುಸ್ಲಿಮರು ಇಲ್ಲಿ ಯಾವುದೇ ಇಸ್ಲಾಮಿಕ್ ಸಂಪ್ರದಾಯದಲ್ಲಿ ಪೂಜಿಸಬಹುದು. ತಾವು ವಾಸಿಸುವ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲಿಘಿ ಜಮಾಅತ್ ಕೇಂದ್ರ ಕಚೇರಿ ಇದೆ ಮತ್ತು ಅವು ತುಂಬಾ ಕಟ್ಟುನಿಟ್ಟಾದ ಮತ್ತು ಸಾಂಪ್ರದಾಯಿಕವಾಗಿವೆ ಅದರ ಪಕ್ಕದಲ್ಲಿ, ಜನರು ನಿಜಾಮುದ್ದೀನ್ ಉಲಿಯಾ ಸಮಾಧಿಯಲ್ಲಿ ಪ್ರಾರ್ಥನೆ ಮತ್ತು ಕವ್ವಾಲಿಸ್ ಹಾಡುವ ಸೂಫಿ ಸಂಪ್ರದಾಯವಿದೆ ಎಂಬ ಆಧಾರದ ವಿವರಣೆ ನೀಡಿದ್ದಾರೆ.

ಎಲ್ಲರಿಗೆ ಗೊತ್ತಿರುವಂತೆ ಭಾರತ ವೈವಿಧ್ಯತೆಯಲ್ಲಿ ಏಕತೆಗೆ ಹೆಸರಾಗಿದೆ. ಇಂಥ ದೇಶದಲ್ಲಿಯೂ ಆಗಾಗ ಭಿನ್ನ ಸ್ವರ ಕೇಳಿಬರುವುದು ಮಾತ್ರ ವಿಚಿತ್ರ ಎಂದು ಹೇಳಿದ್ದಾರೆ.

click me!