
ನವದೆಹಲಿ (ಜೂ. 01): ಜೂನ್ 1ರಿಂದ ಜೂನ್ 10ರವರೆಗೆ ಮುಷ್ಕರ ನಡೆಸಲು ದೇಶದ ಹಲವೆಡೆಯ ರೈತರು ನಿರ್ಧರಿಸಿದ್ದಾರೆ. ಆದರೆ ಇದು ಯಾವುದೋ ಒಂದು ಸ್ಥಳದಲ್ಲಿ ಸೇರಿ ಪ್ರತಿಭಟನೆ ಮಾಡುವ ಮುಷ್ಕರವಲ್ಲ. ಬದಲಾಗಿ, ತರಕಾರಿ ಹಾಗೂ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಿ ಮಾಡುವ ಮುಷ್ಕರ ಇದಾಗಿದ್ದು, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ದೇಶದ ಸುಮಾರು 130 ರೈತಪರ ಸಂಘಟನೆಗಳನ್ನು ಪಳಗೊಂಡ ರಾಷ್ಟ್ರೀಯ ಕಿಸಾನ್ ಮಹಾಸಂಘದ ಆಶ್ರಯದಲ್ಲಿ ಈ ಮುಷ್ಕರ ನಡೆಯಲಿದೆ.
ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡುವಂತೆ, ಸಾಲ ಮನ್ನಾ ಮಾಡುವಂತೆ ಮತ್ತು ರೈತರ ಜೀವನಾಡಿಯಾದ ಜನರೇಟರ್/ಟ್ರ್ಯಾಕ್ಟರ್‌ಗೆ ಬೇಕಾದ ಡೀಸೆಲ್ ಬೆಲೆ ಏರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಈ ಮುಷ್ಕರ ನಿಗದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.