
ಹಾವೇರಿ (ಫೆ.17): ಸಾಲದ ಹೊರೆಯಿಂದ ಮನನೊಂದ ರೈತನೊಬ್ಬ ಟ್ರಾನ್ಸ್ ಫಾರ್ಮರ್ ಹತ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಶಿರಗೋಡ ಗ್ರಾಮದಲ್ಲಿ ನಡೆದಿದೆ.
ಬೆಳೆಗೆ ನೀರಿಲ್ಲದೆ ಒಣಗಿದ ಬೆಳೆಯಿಂದ ನೊಂದು ಹೊಲದಲ್ಲಿದ್ದ ವಿದ್ಯುತ್ ಟ್ರಾನ್ಸಪಮ೯ರ್ ಹಿಡಿದು ರೈತ ಸಾಬ್ ಅರಿಶಿಣಗುಪ್ಪಿ ಸಾವಿಗೆ ಶರಣಾಗಿದ್ದಾನೆ. ತನ್ನ 4 ಎಕರೆಯ ಜಮೀನಿನಲ್ಲಿ ಬತ್ತ ಬೆಳೆಯಲು 3 ಲಕ್ಷ ಬ್ಯಾಂಕ್ ಮತ್ತು ಕೈಗಡ ಸಾಲಮಾಡಿದ್ದ. ಸರಿಯಾಗಿ ಬೆಳೆ ಬರದ ಹಿನ್ನೆಲೆ ಸಾವಿಗೆ ಶರಣಾಗಿದ್ದಾನೆ.
ಹಾನಗಲ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.