ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬದುಕಿದ್ದಾರೆಂದು ಮೃತದೇಹಕ್ಕೆ ಚಿಕಿತ್ಸೆ ?

By Suvarna Web DeskFirst Published Apr 8, 2017, 12:47 PM IST
Highlights

ಚಿಕಿತ್ಸೆವೇಳೆಅವರುಕೊನೆಯುಸಿರೆಳೆದಿದ್ದುಸಂಬಂಧಿಕರಿಗೆತಿಳಿಸಿರಲಿಲ್ಲವಂತೆ.ಕೋಮಾದಲ್ಲಿದ್ದಾರೆಎಂದುಹೊರಗಡೆಯಿಂದರೋಗಿಯನ್ನುತೋರಿಸ್ತಿದ್ದಾರೆ.

ಬೆಂಗಳೂರು(ಏ.08): ಮೃತ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬದವರು ವೈದ್ಯರು ವಿರುಧ್ಧ  ತಿರುಗಿ ಬಿದ್ದ ಘಟನೆ ಬೆಂಗಳೂರಿನ ಶಂಕರ್ ಮಠ ಬಳಿಯ ಕಾರ್ಡ್ ರೋಡ್ ಆಸ್ಪತ್ರೆಯಲ್ಲಿ ನಡೆದಿದೆ.

ಗಂಗಮ್ಮ ಎಂಬ ಮಹಿಳೆ ಕಳೆದ ಬುಧವಾರದಂದು ಹರ್ನಿಯಾ ಚಿಕಿತ್ಸೆಗೆಂದು ಬಂದಿದ್ದರಂತೆ. ಚಿಕಿತ್ಸೆ ವೇಳೆ ಅವರು ಕೊನೆಯುಸಿರೆಳೆದಿದ್ದು ಸಂಬಂಧಿಕರಿಗೆ ತಿಳಿಸಿರಲಿಲ್ಲವಂತೆ.  ಕೋಮಾದಲ್ಲಿದ್ದಾರೆ ಎಂದು ಹೊರಗಡೆಯಿಂದ ರೋಗಿಯನ್ನು ತೋರಿಸ್ತಿದ್ದಾರೆ. ಅವರು ಸತ್ತಿರೋದು ಅಲ್ಲಿಯ ಸಿಬ್ಬಂದಿಗಳಿಂದಲೇ ಗೊತ್ತಾಗಿದೆ ಹೀಗಾಗಿ ದುಡ್ಡು ಸುಲಿಯಲು ಹೀಗೆ ಮಾಡ್ತಿದ್ದಾರೆ ಎಂದು ಮೃತರ ಮಕ್ಕಳು ಆರೋಪ ಮಾಡ್ತಿದ್ದಾರೆ. ಆದರೆ ವೈದ್ಯರು ಮಾತ್ರ ಆಕೆ ಮೃತ ಪಟ್ಟಿಲ್ಲ ಕೋಮಾದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇವರಿಬ್ಬರಲ್ಲಿ ಯಾರ ಹೇಳಿಕೆ ಸುಳ್ಳು ನಿಜ ಅನ್ನೋದು ಆಕೆಯ ದೇಹಸ್ಥಿತಿ ಮೇಲೆ ನಿಂತಿದೆ . ಏನೇ ಆಗಲಿ ನಡೆದುಕೊಂಡು ಬಂದ ಮಹಿಳೆ ಕೋಮಾಗೆ ಹೋಗಿದ್ದು ಯಾಕೆ ಅನ್ನೋದು ಈಗ ಯಕ್ಷ ಪ್ರಶ್ನೆಯಾಗಿದೆ. ಆಕೆ ಆರೋಗ್ಯವಾಗಿರಲಿ ಅನ್ನುವುದು ನಮ್ಮ ಹಾರೈಕೆ.  

click me!