
ತಿರುವನಂತಪುರ(ಜು. 23) ನೆರೆಮನೆಯ ನಾಯಿಯೊಂದಿಗೆ ಪ್ರೀತಿ-ಪ್ರೇಮ-ಪ್ರಣಯದಲ್ಲಿದ್ದ ನಾಯಿ ಮಾಲೀಕನ ಸಿಟ್ಟಿಗೆ ಗುರಿಯಾಗಿ ಮನೆಯಿಂದ ಹೊರಹಾಕಲ್ಪಟ್ಟಿದೆ.
ತಿರುವನಂತಪುರದ ಚೆಕಾಯ್ ಪ್ರದೇಶದ ಮಾರುಕಟ್ಟೆಯಲ್ಲಿ ಪತ್ತೆಯಾದ ನಾಯಿಯ ಕುತ್ತಿಗೆಗೊಂದು ಪಟ್ಟಿಯನ್ನು ಹಾಕಿದ್ದು ಒಕ್ಕಣೆ ಬರೆಯಲಾಗಿದೆ. ನಾಯಿ ಪೋಟೋ ಮತ್ತು ಬರವಂಣಿಯನ್ನು ಶ್ರೀದೇವಿ ಎಸ್ ಕರ್ಥ ಎಂಬುವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಮಾಲೀಕ ಜೈಲಿಗೆ: ಠಾಣೆಯೇ ಮನೆಯಾಯ್ತು ಈ ನಾಯಿಗೆ!
ಈ ನಾಯಿ ತುಂಬಾ ಒಳ್ಳೆಯದು. ಕಡಿಮೆ ಆಹಾರ ತೆಗೆದುಕೊಳ್ಳುತ್ತದೆ. ಯಾರಿಗೂ ಇಲ್ಲಿಯವರೆಗೆ ಕಚ್ಚಿಲ್ಲ. ಬೊಗಳುವ ಹವ್ಯಾಸ ಇಟ್ಟುಕೊಂಡಿದೆ. ಐದು ದಿನಕ್ಕೊಮ್ಮೆ ಸ್ನಾನ ಮಾಡಿಸಲಾಗುತ್ತಿತ್ತು ಎಂದು ಮುಂದಾಗಿ ದಿನಚರಿಯನ್ನು ಬರೆದು ಕುತ್ತಿಗೆ ಪಟ್ಟಿಗೆ ಹಾಕಲಾಗಿದೆ.
ಪೊಮೇರಿಯನ್ ನಾಯಿಯ ಫೋಟೋ ಹಾಗೂ ಫೋಟೋವನ್ನು ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಶ್ರೀದೇವಿ ಎಸ್. ಕರ್ಥ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರಾಣಿಪ್ರಿಯರು ನಾಯಿಯ ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.