![[ಸುಳ್ ಸುದ್ದಿ] ಶೀಘ್ರದಲ್ಲೇ ಗ್ರಾಹಕರಿಗೆ ಟೆಲಿಕಾಂ ಕಂಪನಿಗಳೇ ಹಣ ನೀಡುವ ಪ್ಲಾನ್ ಬಿಡುಗಡೆ!](https://static.asianetnews.com/images/w-412,h-232,imgid-c16e2203-f592-41ef-b712-b8be74ee5494,imgname-image.jpg)
ಪರಸ್ಪರ ಪೈಪೋಟಿ ನಡೆಸಿ ಹೈರಾಣಾಗಿರುವ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಇನ್ನಾವ ರೀತಿಯ ಆಕರ್ಷಕ ಪ್ಲಾನ್ ಬಿಡುಗಡೆ ಮಾಡಬಹುದು ಎಂಬ ಚಿಂತೆಗೆ ಬಿದ್ದಿವೆ.
ಏರ್‌ಟೆಲ್ ಕಂಪನಿ ಒಂದು ಆಫರ್ ಬಿಡುಗಡೆ ಮಾಡಿದರೆ ಅದರ ಅಪ್ಪನಂತಹ ಆಫರನ್ನು ವೊಡಾ ಫೋನ್ ಬಿಡುಗಡೆ ಮಾಡುತ್ತದೆ. ಅದರ ಬೆನ್ನಿಗೇ ಬಿಎಸ್‌ಎನ್‌ಎಲ್ ಇನ್ನೊಂದು ಕಿಲ್ಲರ್ ಪ್ಲಾನ್ ಘೋಷಿಸುತ್ತದೆ. ಅಷ್ಟರಲ್ಲಿ ಜಿಯೋ ಕಂಪನಿ ಇವೆಲ್ಲವುಗಳನ್ನೂ ಮೀರಿಸುವ ಪ್ಲಾನ್ ಬಿಡುಗಡೆ ಮಾಡುತ್ತದೆ.
ಇದು ಹೀಗೇ ಮುಂದುವರಿದರೆ ಹೊಸ ಪ್ಲಾನ್ ಹುಡುಕುವುದು ಕಷ್ಟಎಂದು ಯೋಚಿಸಿರುವ ಟೆಲಿಕಾಂ ಕಂಪನಿಯೊಂದು ಶೀಘ್ರದಲ್ಲೇ ಎಲ್ಲಾ ಪ್ಲಾನ್‌ಗಳನ್ನೂ ಮೀರಿಸುವ ‘ಪ್ಲಾನ್‌ಗಳ ಬಾಪ್' ಎಂಬ ಆಫರ್ ಘೋಷಿಸಲಿದೆ. ಅದರಡಿ ಆ ಟೆಲಿಕಾಂ ಕಂಪನಿಯು ಉಚಿತ ಇಂಟರ್ನೆಟ್, ಉಚಿತ ಅನ್‌ಲಿಮಿಟೆಡ್ ಕಾಲ್ ನೀಡುವುದರ ಜೊತೆಗೆ ಗ್ರಾಹಕರಿಗೆ ಇಂತಿಷ್ಟುಎಂದು ಪ್ರತಿ ತಿಂಗಳು ತಾನೇ ಹಣ ನೀಡಲಿದೆ ಎಂದು ಸುಳ್‌ಸುದ್ದಿಗೆ ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.