ಸುಳ್ಳು ಸುದ್ದಿ ಪ್ರಸಾರ ಮಾಡಿದರೆ 6 ವರ್ಷಗಳ ಶಿಕ್ಷೆ

By Suvarna Web DeskFirst Published Apr 4, 2018, 10:16 AM IST
Highlights

ಪತ್ರಿಕೆ ಮತ್ತು ಟೀವಿ ವಾಹಿನಿಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ಕಾನೂನನ್ನು ಮಲೇಷ್ಯಾ ಸರ್ಕಾರ ಸಂಸತ್ತಿನಲ್ಲಿ ಮಂಗಳವಾರ ಅಂಗೀಕರಿಸಿದ್ದು, ಸುಳ್ಳು ಸುದ್ದಿ ಪ್ರಸಾರ ಮಾಡಿದವರನ್ನು ಗರಿಷ್ಠ 6 ವರ್ಷಗಳ ಶಿಕ್ಷೆಗೆ ಗುರಿಪಡಿಸಬಹುದಾಗಿದೆ.

ಕೌಲಾಲಂಪುರ: ಪತ್ರಿಕೆ ಮತ್ತು ಟೀವಿ ವಾಹಿನಿಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ಕಾನೂನನ್ನು ಮಲೇಷ್ಯಾ ಸರ್ಕಾರ ಸಂಸತ್ತಿನಲ್ಲಿ ಮಂಗಳವಾರ ಅಂಗೀಕರಿಸಿದ್ದು, ಸುಳ್ಳು ಸುದ್ದಿ ಪ್ರಸಾರ ಮಾಡಿದವರನ್ನು ಗರಿಷ್ಠ 6 ವರ್ಷಗಳ ಶಿಕ್ಷೆಗೆ ಗುರಿಪಡಿಸಬಹುದಾಗಿದೆ.

ಪ್ರತಿಪಕ್ಷಗಳ ಪ್ರತಿಭಟನೆ ಹಾಗೂ ತೀವ್ರ ವಿರೋಧದ ನಡುವೆಯೂ ಸಂಸತ್ತಿನಲ್ಲಿ ಮಸೂದೆ ಅಂಗೀಕಾರಗೊಂಡಿದ್ದು, ರಾಜ ಕುಟುಂಬದ ಅನುಮತಿಯ ಬಳಿಕ ಕಾಯ್ದೆ ಜಾರಿಯಾಗಲಿದೆ. ಈ ಕಾನೂನು ಕೇವಲ ಸ್ಥಳೀಯ ಮಾಧ್ಯಮಕ್ಕಷ್ಟೇ ಅಲ್ಲ, ವಿದೇಶಿ ಮಾಧ್ಯಮಗಳಿಗೂ ಅನ್ವಯವಾಗಲಿದೆ.

ಮೂಲ ಕಾನೂನಿನಲ್ಲಿ ಸುಳ್ಳು ಸುದ್ದಿ ಪ್ರಸಾರಕ್ಕೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ 85 ಲಕ್ಷ ರು.ವರೆಗೆ ದಂಡ ವಿಧಿಸುವ ಪ್ರಸ್ತಾವನೆ ಇತ್ತು. ಆದರೆ, ಈ ಕ್ರಮಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಲೇಷ್ಯಾ ಸರ್ಕಾರ ಶಿಕ್ಷೆಯ ಪ್ರಮಾಣವನ್ನು 6 ವರ್ಷಕ್ಕೆ ಇಳಿಸಿದೆ.

ಫ್ರಾನ್ಸ್‌ನಲ್ಲಿ ಮಾರ್ಗದರ್ಶಿ ಸೂತ್ರ: ಸುಳ್ಳು ಸುದ್ದಿ ಪ್ರಸಾರದ ವಿರುದ್ಧ ಹೋರಾಡಲು ಪತ್ರಕರ್ತರಿಗೆ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿವೆ. ಏಜೆನ್ಸಿ ಫ್ರಾನ್ಸ್ ಪ್ರೆಸ್, ಯೂರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್ ಮತ್ತು ಗ್ಲೋಬಲ್ ಎಡಿಟರ್ಸ್ ನೆಟ್‌ವರ್ಕ್‌ಗಳು ಸುದ್ದಿಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಿಂದ ಪತ್ರಕರ್ತರಿಗೆ ಮಾರ್ಗದರ್ಶಿ ಸೂತ್ರ ಅಳವಡಿಸಲು ಬೆಂಬಲ ವ್ಯಕ್ತಪಡಿಸಿವೆ.

click me!