ಸಂಗಾತಿ ಮೊಬೈಲ್ ಕದ್ದು ನೋಡಿದ್ರೆ 87 ಲಕ್ಷ ದಂಡ

By Suvarna Web DeskFirst Published Apr 4, 2018, 10:06 AM IST
Highlights

ಸೌದಿ ಅರೇಬಿಯಾದಲ್ಲಿ ಪತ್ನಿ ಅಥವಾ ಪತಿಯ ಮೊಬೈಲ್ ಫೋನ್‌ಗಳನ್ನು ಅವರ ಅನುಮತಿ ಇಲ್ಲದೆ, ಉಪಯೋಗಿಸದೇ ಇರುವುದೇ ಒಳಿತು.

ರಿಯಾದ್: ಸೌದಿ ಅರೇಬಿಯಾದಲ್ಲಿ ಪತ್ನಿ ಅಥವಾ ಪತಿಯ ಮೊಬೈಲ್ ಫೋನ್‌ಗಳನ್ನು ಅವರ ಅನುಮತಿ ಇಲ್ಲದೆ, ಉಪಯೋಗಿಸದೇ ಇರುವುದೇ ಒಳಿತು. ಹೌದು. ಇದು ನನ್ನಿಷ್ಟ ಅಂದು ಉಡಾಫೆ ಮಾಡಿದ್ರೆ ಜೈಲು ಸೇರೋದು ಗ್ಯಾರಂಟಿ. ಇಂಥ ಒಂದು ಕಾನೂನನ್ನು ಸೌದಿ ಅರೇಬಿಯಾ ಸರ್ಕಾರ ಘೋಷಣೆ ಮಾಡಿದೆ.

ಯಾವುದೇ ವ್ಯಕ್ತಿಯು ತನ್ನ ಸಂಗಾತಿಯ ತಪ್ಪನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಮೊಬೈಲನ್ನು ಅವರ ಅನುಮತಿ ಯಿಲ್ಲದೆ ನೋಡಿದಲ್ಲಿ, ಸುಮಾರು 87 ಲಕ್ಷ ರು. ದಂಡ ಮತ್ತು ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

click me!