ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ್ ಖರ್ಗೆ ಹೆಗಲಿಗೆ

First Published Jun 23, 2018, 11:52 AM IST
Highlights

ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಹಾಗೂ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹಾರಾಷ್ಟ್ರ ಉಸ್ತುವಾರಿ ಹುದ್ದೆಗೆ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ.

ಮುಂಬೈ: ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಹಾಗೂ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹಾರಾಷ್ಟ್ರ ಉಸ್ತುವಾರಿ ಹುದ್ದೆಗೆ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಖರ್ಗೆ ಅವರಿಗೆ ಸಹಾಯ ಮಾಡಲು ಗುಜರಾತಿನ ಸೋನಂ ಪಟೇಲ್, ಹರ‌್ಯಾಣದ ಆಶೀಶ್ ದುವಾ ಹಾಗೂ ತೆಲಂಗಾಣದ ಸಂಪತ್‌ಕುಮಾರ್ ಅವರನ್ನು ಎಐಸಿಸಿ ಕಾರ್ಯದರ್ಶಿಗಳಾಗಿ ನೇಮಿಸಿ,
ಮಹಾರಾಷ್ಟ್ರಕ್ಕೆ ನಿಯುಕ್ತಿಗೊಳಿಸಿದೆ. 

ಕಳೆದ 9 ವರ್ಷದಿಂದ ಮಹಾರಾಷ್ಟ್ರ ಉಸ್ತುವಾರಿ ಹುದ್ದೆಯಲ್ಲಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ ಪ್ರಕಾಶ್ ಅವರನ್ನು ಜವಾಬ್ದಾರಿ ಯಿಂದ ಬಿಡುಗಡೆಗೊಳಿಸಲಾಗಿದೆ. 48  ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರ ವನ್ನು ಗಂಭೀರವಾಗಿ ಪರಿಗಣಿಸಿಯೇ ಪಕ್ಷ ಖರ್ಗೆ ಅವರನ್ನು ನೇಮಕ ಮಾಡಿದೆ.

ಕರ್ನಾಟಕದವರಾಗಿರುವುದರಿಂದ ಅವರಿಗೆ ಪಕ್ಕದ ಮಹಾರಾಷ್ಟ್ರ ಚೆನ್ನಾಗಿ ಗೊತ್ತು ಎಂಬ ಕಾರಣಕ್ಕೆ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರೀ ಚರ್ಚೆ: ಖರ್ಗೆ,ಹಾಲಿ ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿದ್ದಾರೆ, ಜೊತೆಗೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಕೂಡಾ ಆಗಿದ್ದಾರೆ. 

ಖರ್ಗೆ ಅವರನ್ನು ದೆಹಲಿಯಿಂದ ದೂರ ಇಟ್ಟು ಮಹಾರಾಷ್ಟ್ರಕ್ಕೆ ಕಳುಹಿಸುತ್ತಿರುವ ಬಗ್ಗೆ  ಪಕ್ಷದ ಆಂತರಿಕ ವಲಯದಲ್ಲಿ ಸಾಕಷ್ಟು ಚರ್ಚೆಯೂ ಆರಂಭವಾಗಿದೆ. ಲೋಕಸಭೆಯಲ್ಲಿ ಖರ್ಗೆ ಸ್ಥಾನಕ್ಕೆ ಯುವಕರನ್ನು ಕೂರಿಸುವ ಇರಾದೆಯಲ್ಲಿ ರಾಹುಲ್ ಇರಬಹುದು ಎನ್ನಲಾಗುತ್ತಿ

click me!