(ಸುಳ್ ಸುದ್ದಿ) ಅಧಿಕಾರ ಹಿಡಿಯಲು ಪಗಡೆ ಆಟಕ್ಕೆ ಎಚ್ ಡಿಕೆ ಆಹ್ವಾನಿಸಿದ ಬಿಎಸ್ ವೈ ?

Published : Sep 21, 2018, 04:06 PM ISTUpdated : Sep 21, 2018, 04:08 PM IST
(ಸುಳ್ ಸುದ್ದಿ) ಅಧಿಕಾರ ಹಿಡಿಯಲು ಪಗಡೆ ಆಟಕ್ಕೆ ಎಚ್ ಡಿಕೆ ಆಹ್ವಾನಿಸಿದ ಬಿಎಸ್ ವೈ ?

ಸಾರಾಂಶ

ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿರುವ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ಆರೋಪ- ಪ್ರತ್ಯಾರೋಪಗಳ ಸಮರ ಅಂತಿಮ ಹಂತ ತಲುಪಿದೆ.

 
ಬೆಂಗಳೂರು : ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿರುವ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ಆರೋಪ- ಪ್ರತ್ಯಾರೋಪಗಳ ಸಮರ ಅಂತಿಮ ಹಂತ ತಲುಪಿದೆ. ಕುಮಾರಸ್ವಾಮಿ ಅವರನ್ನು ಯಡಿಯೂರಪ್ಪ ಪಗಡೆ ಆಟಕ್ಕೆ ಆಹ್ವಾನಿಸಿದ್ದಾರೆ. 

ಒಂದು ವೇಳೆ ಈ ಆಟದಲ್ಲಿ ಏನಾದರೂ ಕುಮಾರಸ್ವಾಮಿ ಸೋತರೆ ಕೂಡಲೆ ಅಧಿಕಾರವನ್ನು ಹಸ್ತಾಂತರಿಸಿ, 5 ವರ್ಷ ವಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಅದೇ ರೀತಿ ಯಡಿಯೂರಪ್ಪ ಸೋತರೆ 5 ವರ್ಷ ವಿಪಕ್ಷ ಸ್ಥಾನದಲ್ಲೇ ಬಿಜೆಪಿ ಇರಲಿದೆ. ಸರ್ಕಾರ ರಚಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ. 

ಹೀಗಾಗಿ ವಿಧಾನಸೌಧದ ಮೊಗಸಾಲೆಯಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಮಧ್ಯೆ ಪಗಡೆ ಆಟ ನಿಗದಿಯಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?