
ಬೆಂಗಳೂರು : ಮಹಾನ್ ದೈವಭಕ್ತರಾದ ಎಚ್.ಡಿ. ರೇವಣ್ಣಗಿಂತ ಮೊದಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮುಂದೆ ದೇವರು ಪ್ರತ್ಯಕ್ಷನಾಗಿ ವರ ದಯಪಾಲಿಸಿದ್ದಾನೆ.
ಕಳೆದ ಒಂದು ವರ್ಷದಲ್ಲಿ ಡಿಕೆಶಿ ರಾಜ್ಯದ ಎಲ್ಲಾ ದೇವಾಲಯಗಳಿಗೂ ಮೂರು ಭಾರಿ ಭೇಟಿ ನೀಡಿದ್ದಾರೆ. ಆದರೆ, ರೇವಣ್ಣ ಅವರು ಹಾಸನ ದೇವಾಲಯಗಳನ್ನು ಬಿಟ್ಟು ಬೇರೆ ಕಡೆ ಇರುವ ದೇವಾಲಯಗಳಿಗೆ ಅಷ್ಟಾಗಿ ಭೇಟಿ ನೀಡಿಲ್ಲ.
ಹೀಗಾಗಿ ಇವರಿಬ್ಬರಲ್ಲಿ ಡಿಕೆಶಿಯ ಭಕ್ತಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾಗಿ ಯಾವ ವರಬೇಕು ಎಂದು ಕೇಳಿದ್ದಾನೆ. ತಕ್ಷಣವೇ ಡಿಕೆಶಿ ದೇವರಲ್ಲಿ ತನಗೆ ಐಟಿ ದಾಳಿಯಿಂದ ಮೊದಲು ಮುಕ್ತಿ ನೀಡಿದರೆ ಸಾಕು. ಸಿಎಂ ಹುದ್ದೆಯನ್ನು ನಾನೇ ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದು, ದೇವರು ತಥಾಸ್ತು ಎಂದು ವಾಪಸ್ಸಾಗಿದ್ದಾನೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.