[ಸುಳ್ ಸುದ್ದಿ ವಾರ್ತೆ] ಫೇಸ್‌ಬುಕ್ ಜೊತೆ ಆಧಾರ್ ಜೋಡಣೆಗೆ ಡಿ.31ರ ಗಡುವು: ಇಲ್ಲದಿದ್ದರೆ ಖಾತೆ ಡಿಲೀಟ್!?

Published : Sep 22, 2017, 01:31 PM ISTUpdated : Apr 11, 2018, 12:56 PM IST
[ಸುಳ್ ಸುದ್ದಿ ವಾರ್ತೆ] ಫೇಸ್‌ಬುಕ್ ಜೊತೆ ಆಧಾರ್ ಜೋಡಣೆಗೆ ಡಿ.31ರ ಗಡುವು: ಇಲ್ಲದಿದ್ದರೆ ಖಾತೆ ಡಿಲೀಟ್!?

ಸಾರಾಂಶ

ನಕಲಿ ಖಾತೆಗಳಿಗೆ ಕಡಿವಾಣ ಹಾಕುವ ನಿಟ್ಟಿನಿಂದ ಫೇಸ್‌ಬುಕ್ ಅನ್ನು ಆಧಾರ್ ಜೊತೆ ಜೋಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಬಳಕೆದಾರರು ತಮ್ಮ ಫೇಸ್‌ಬುಕ್ ಖಾತೆಯನ್ನು ಆಧಾರ್ ಜೊತೆ ಜೋಡಣೆ ಮಾಡಲು ಡಿ.31 ಕೊನೆಯ ದಿನವಾಗಿದೆ. ಒಂದು ವೇಳೆ ಡಿ.31ರ ಒಳಗಾಗಿ ಫೇಸ್‌ಬುಕ್ ಅನ್ನು ಆಧಾರ್ ಜೊತೆ ಲಿಂಕ್ ಮಾಡದೇ ಹೋದರೆ ಖಾತೆ ಡಿಲೀಟ್ ಆಗಲಿದೆ. ಹೊಸ ಖಾತೆ ತೆರೆಯಲೂ ಆಧಾರ್ ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ಸುಳ್ ಸುದ್ದಿ ವಾರ್ತೆ]

ಬೆಂಗಳೂರು: ನಕಲಿ ಖಾತೆಗಳಿಗೆ ಕಡಿವಾಣ ಹಾಕುವ ನಿಟ್ಟಿನಿಂದ ಫೇಸ್‌ಬುಕ್ ಅನ್ನು ಆಧಾರ್ ಜೊತೆ ಜೋಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಬಳಕೆದಾರರು ತಮ್ಮ ಫೇಸ್‌ಬುಕ್ ಖಾತೆಯನ್ನು ಆಧಾರ್ ಜೊತೆ ಜೋಡಣೆ ಮಾಡಲು ಡಿ.31 ಕೊನೆಯ ದಿನವಾಗಿದೆ. ಒಂದು ವೇಳೆ ಡಿ.31ರ ಒಳಗಾಗಿ ಫೇಸ್‌ಬುಕ್ ಅನ್ನು ಆಧಾರ್ ಜೊತೆ ಲಿಂಕ್ ಮಾಡದೇ ಹೋದರೆ ಖಾತೆ ಡಿಲೀಟ್ ಆಗಲಿದೆ. ಹೊಸ ಖಾತೆ ತೆರೆಯಲೂ ಆಧಾರ್ ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2018ರ ಜ.1ರಿಂದ ಫೇಸ್‌ಬುಕ್‌ನಲ್ಲಿ ಆಧಾರ್ ಜೊತೆ ಲಿಂಕ್ ಆಗಿರುವವರ ಖಾತೆಗೆ ಹಸಿರು ಗುರುತಿನ ರೈಟ್ ಮಾರ್ಕ್ ಹಾಕಲಾಗುತ್ತದೆ. ಇದು ಅಧಿಕೃತ ಅಕೌಂಟ್ ಆಗಿರಲಿದೆ. ಅಲ್ಲದೇ, 10 ಗಂಟೆಗೂ ಹೆಚ್ಚು ಹೊತ್ತು ಫೇಸ್‌ಬುಕ್ ಮುಂದೆ ಕುಳಿತುಕೊಳ್ಳುವವರು ಮತ್ತು ದಿನವಿಡೀ ಚಾಟ್ ಮಾಡುವವರನ್ನು ಗುರುತಿಸಿ ವಾರ್ನಿಂಗ್ ನೀಡಲಾಗುತ್ತದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.   [ಸುಳ್ ಸುದ್ದಿ ವಾರ್ತೆ]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಭೀರತೆ ಪಡೆದ ಕಲ್ಲಿದ್ದಲು ಕಳ್ಳತನ ಪ್ರಕರಣ, ಪವರ್ ಮೇಕ್ ಸಂಸ್ಥೆಯ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು
ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್