ವಾಹನದಲ್ಲಿ ನಕಲಿ ನಂಬರ್ ಪ್ಲೇಟ್ ಇದ್ದರೆ ಹುಷಾರ್!

By Web DeskFirst Published Dec 25, 2018, 9:06 AM IST
Highlights

ವಾಹನದಲ್ಲಿ ನಕಲಿ ನಂಬರ್ ಪ್ಲೇಟ್ ಇದ್ದರೆ ಹುಷಾರ್. ಇದೀಗ ಅದನ್ನು ಕಂಡು ಹಿಡಿಯುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. 

ಬೆಂಗಳೂರು: ನಗರದ ಇಭಾನ್ ಡಿಜಿಟಲ್ ಎಡ್ಜ್ ಸಂಸ್ಥೆಯು ವಾಹನಗಳ ನಕಲಿ ಹಾಗೂ ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. 

ಆಸ್ಟ್ರೇಲಿಯಾ ಮೂಲದ ಮೆಸರ್ಸ್ ನ್ಯಾನೋಟ್ಯಾಗ್ ಟೆಕ್ನಾಲಜೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಇಭಾನ್ ನ್ಯಾನೋ ಮತ್ತು ಮೈಕ್ರೋ ಡಾಟ್‌ನಿಂದ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಎಚ್‌ಎಸ್‌ಆರ್‌ಪಿ) ನಕಲು ಮಾಡಲು ಸಾಧ್ಯವಾಗದಿರುವಷ್ಟು ಭದ್ರತೆ ನೀಡಲಿದೆ. 

ಕೇಂದ್ರ ಸರ್ಕಾರ 2019 ರ ಏಪ್ರಿಲ್‌ನಿಂದ ವಾಹನ ತಯಾರಕರೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯಗೊಳಿಸಿರುವುದರಿಂದ ಮುಂದಿನ  ದಿನಗಳಲ್ಲಿ ಈ ತಂತ್ರಜ್ಞಾನ ಸಾಕಷ್ಟು ಉಪಯೋಗಕ್ಕೆ ಬರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

click me!