![[ಸುಳ್ ಸುದ್ದಿ] ದೇಶದ ಎಲ್ಲಾ ಮಠದಲ್ಲೂ ಭಕ್ತೆಯರಿಗಾಗಿ ಪ್ರತ್ಯೇಕ ಸ್ತ್ರೀ ಸ್ವಾಮಿಣಿ ನೇಮಕಕ್ಕೆ ಆದೇಶ?](https://static.asianetnews.com/images/w-412,h-232,imgid-9fc7e00b-3e0a-4a78-ba7a-f58593f91600,imgname-image.jpg)
ಸುಳ್ ಸುದ್ದಿ ವಾರ್ತೆ, ನವದೆಹಲಿ: ಡೇರಾ ಸಚ್ಚಾ ಸೌಧದ ಗುರ್ಮಿತ್ ರಾಮ್ ಸಿಂಗ್ ರಹೀಮ್ ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋದ ಮೇಲೆ ಮಠದಲ್ಲಿ ನಡೆಯುವ ಅಂತಹ ಪ್ರಕರಣಗಳ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಗುರ್ಮೀತ್ ಅಷ್ಟೇ ಅಲ್ಲದೇ ನಿತ್ಯಾನಂದ ಸೇರಿದಂತೆ ದೇಶದ ಹತ್ತಾರು ಮುಖಂಡರು ಇಂತಹ ಪ್ರಕರಣದಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಮಠಗಳಳಲ್ಲೂ ಭಕ್ತೆಯರಿಗಾಗಿ ಪ್ರತ್ಯೇಕ ವಿಭಾಗ ತೆರೆದು, ಅವರಿಗಾಗಿ ಪ್ರತ್ಯೇಕ ಸ್ವಾಮಿಣಿಯನ್ನು ನೇಮಕಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಶೀಘ್ರದಲ್ಲೇ ಕಾಯ್ದೆ ರೂಪಿಸುವುದಕ್ಕೂ ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಪುರುಷ ಸನ್ಯಾಸಿಗಳಿಗೂ ಮಹಿಳಾ ಭಕ್ತೆಯರಿಗೂ ಯಾವುದೇ ರೀತಿಯ ಭೇಟಿಯಿಲ್ಲದಂತೆ ಮಠಗಳಲ್ಲಿ ವ್ಯವಸ್ಥೆ ಮಾಡಬೇಕು, ಮಹಿಳೆಯರಿಗೆ ಮಹಿಳಾ ಸನ್ಯಾಸಿಗಳೇ ಇರಬೇಕು ಎಂಬುವುದು ಸರ್ಕಾರದ ಆಶಯ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.