ಶಬರಿಮಲೆಗೆ ಮಹಿಳೆ ಪ್ರವೇಶ ತೀರ್ಪು ನೀಡಿದ ಜಡ್ಜ್‌ಗೆ ಲಕ್ವ ಹೊಡೆದಿದ್ದು ಹೌದಾ?

By Web DeskFirst Published Oct 26, 2018, 12:54 PM IST
Highlights

ಶಬರಿಮಲೆಗೆ ಮಹಿಳೆಯರು ಪ್ರವೇಶಿಲು ಅವಕಾಶ ನೀಡಿ ತೀರ್ಪು ನೀಡಿದ್ದ ಸುಪ್ರಿಂಕೋರ್ಟ್ ನಿವೃತ್ತ  ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅವರಿಗೆ ಲಕ್ಷ ಹೊಡೆದಿದೆ ಎನ್ನುವ ಸುಳ್ಳು ಸುದ್ದಿಯೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. 

ನವದೆಹಲಿ :  ನಿವೃತ್ತ ಸಿಜೆಐ ದೀಪಕ್ ಮಿಶ್ರಾ ಅವರು ಪಾರ್ಶ್ವ ವಾಯುವಿಗೆ ತುತ್ತಾಗಿದ್ದಾರೆ. ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ನೀಡಬೇಕೆಂದು ತೀರ್ಪು ಕಲ್ಪಿಸಿದ್ದಕ್ಕೆ ಸಿಕ್ಕಿರುವ ಫಲವಿದು, ಎಂದು ಸೋಷಿಯಲ್ ಮಾಡಿಯಾದಲ್ಲೊಂದು ಪೋಸ್ಟ್ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಪರಿಶೀಲಿಸಿದಾಗ, ಕಂಡಿದ್ದೇನು?

ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ವೀಲ್ ಚೇರ್‌ ಮೇಲಿರುವ ಫೋಟೋ ಹಾಕಿದ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ, ಇದು ನಿವೃತ್ತ ಸಿಜೆಐ ಎಂದೇ ಹೇಳಿದ್ದರು. ಈ ಸುಳ್ಳು ಸುದ್ದಿಯನ್ನೇ ನೆಟ್ಟಿಗರು ಸತ್ಯವೆಂದು ನಂಬಿದ್ದಾರೆ. ಅಲ್ಲದೇ ಇದಕ್ಕೆ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡಿ ತೀರ್ಪು ನೀಡಿದ್ದೇ ಕಾರಣ. ಅದಕ್ಕೆ ಅವರಿಗೆ ಈ ರೀತಿಯಾಗಿದ್ದು, ಅಯ್ಯಪ್ಪ ಸ್ವಾಮಿ ಶಪಿಸಿದ್ದಾನೆಂದೇ ಹೇಳಲಾಗಿತ್ತು. 

ಇಂಥ ವಿಕೃತ ಜನರ ಮನೋ ವಿಕಲ್ಪಕ್ಕೆ ಏನು ಹೇಳಬೇಕು?

 

click me!