ಐಸಾ ಕ್ಯಾ?: 2022ರಲ್ಲಿ ಆಗಸದಲ್ಲಿ ಪಾಕ್ ಗಗನಯಾತ್ರಿ!

By Web DeskFirst Published Oct 26, 2018, 12:28 PM IST
Highlights

2022ರಲ್ಲಿ ಬಾಹ್ಯಾಕಾಶದಲ್ಲಿ ಭಾರತ-ಪಾಕ್ ಗಗನಯಾತ್ರಿಗಳ ಸಮಾಗಮ! ಪಾಕ್ ಕೂಡ 2022ರಲ್ಲಿ ಬಾಹ್ಯಾಕಾಶಕ್ಕೆ ಗಗನಯಾತ್ರಿ ಕಳುಹಿಸಲಿದೆಯಂತೆ! 2022ರಲ್ಲಿ ಭಾರತದ ಮೊದಲ ಗಗನಯಾತ್ರಿ ಬಾಹ್ಯಾಕಾಶದಲ್ಲಿ! ಚೀನಾದ ಸಹಾಯದೊಂದಿಗೆ ಪಾಕ್ ಮಾನವ ಸಹಿತ ಬಾಹ್ಯಾಕಾಶ ಯೋಜನೆ

ಇಸ್ಲಾಮಾಬಾದ್(ಅ.26): ಭಾರತದ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯ ಪ್ರಭಾವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೇಲೂ ಆದಂತಿದೆ. ಇಮ್ರಾನ್ ನಮ್ಮ ಮೋದಿ ಹಾದಿಯನ್ನೇ ತುಳಿಯುತ್ತಿರುವಂತೆ ಭಾಸವಾಗುತ್ತಿದೆ.

2022ರಲ್ಲಿ ಭಾರತ ಬಾಹ್ಯಾಕಾಶಕ್ಕೆ ತನ್ನ ಮೊದಲ ಗಗನಯಾತ್ರಿಯನ್ನು ಕಳುಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಿಸಿದ್ದಾರೆ. ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆಯನ್ನು ಇಸ್ರೋ ಈಗಾಗಲೇ ಸಿದ್ಧಪಡಿಸುತ್ತಿದೆ.

ಇದನ್ನು ಕೇಳಿದ್ದೇ ತಡ, ಪಾಕ್ ಪ್ರಧಾನಿ ಕೂಡ ನಾವೂ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುತ್ತೇವೆ ಎಂದು ಘೋಷಿಸಿದ್ದಾರೆ. ಅದೂ ಕೂಡ 2022 ರಲ್ಲೇ ಪಾಕ್ ಬಾಹ್ಯಾಕಾಶ ಯೋಜನೆಯನ್ನು ಅನುಷ್ಠಾನಗೊಳಿಸಲಿದೆಯಂತೆ.

ಈ ಕುರಿತು ಮಾಹಿತಿ ನೀಡಿರುವ ಪಾಕ್ ಮಾಹಿತಿ ಸಚಿವ ಫಹಾದ್ ಚೌಧರಿ, ಚೀನಾದ ಸಹಾಯದೊಂದಿಗೆ ಪಾಕ್ 2022ರಲ್ಲಿ ಬಾಹ್ಯಾಕಾಶಕ್ಕೆ ತನ್ನ ಮೊದಲ ಗಗನಯಾತ್ರಿಯನ್ನು ಕಳುಹಿಸಲಿದೆ ಎಂದು ಘೋಷಿಸಿದ್ದಾರೆ.

ಬಾಹ್ಯಾಕಾಶಕ್ಕೆ ಮಾನವನನ್ನು ಹೊತ್ತೊಯ್ಯುವ ನೌಕೆಯನ್ನು ಪಾಕಿಸ್ತಾನದಲ್ಲೇ ಸಿದ್ಧಪಡಿಸಿ ಅದನ್ನು ಚೀನಾಗೆ ರವಾನೆ ಮಾಡಲಾಗುವುದು ಎಂದು ಚೌಧರಿ ತಿಳಿಸಿದ್ದಾರೆ. ಚೀನಾದ ರಾಕೆಟ್ ಉಡಾವಣಾ ತಂತ್ರಜ್ಞಾನದ ಸಹಾಯದಿಂದ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಎಂದು ಪಾಕ್ ಸ್ಪಷ್ಟಪಡಿಸಿದೆ.

click me!