
ನವದೆಹಲಿ[ಜು.19]: ಅಜಾನುಬಾಹು ಗಾತ್ರದ ಅಸ್ಥಿಪಂಜರದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನು ಮಹಾಭಾರತದ ಪ್ರಮುಖ ಪಾತ್ರವಾದ ಭೀಮನ ಪುತ್ರ ಘಟೋತ್ಕಜನ ಅಸ್ಥಿ ಎಂದು ಹೇಳಲಾಗುತ್ತಿದೆ.
ಈ ಪೋಟೋದೊಂದಿಗೆ, ‘ಮಹಾಭಾರತ ಯುದ್ಧ ನಡೆದ ಸ್ಥಳವಾದ ಕುರುಕ್ಷೇತ್ರದಲ್ಲಿ ಉತ್ಕನನ ಮಾಡಿದಾಗ ಭೀಮನ ಪುತ್ರ ಘಟೋತ್ಕಜನ ಅಸ್ಥಿ ಪತ್ತೆಯಾಗಿದೆ. ಅದು ಸುಮಾರು 80 ಅಡಿ ಉದ್ದವಿದೆ’ ಎಂದು ಒಕ್ಕಣೆ ಬರೆಯಲಾಗಿದೆ. ಇದೀಗ ಟ್ವೀಟರ್, ಫೇಸ್‌ಬುಕ್‌ಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಮಹಾಭಾರತ ಕಾಲದ ಅಸ್ಥಿ ಪತ್ತೆಯಾಗಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳಸುದ್ದಿ, 2015ರಿಂದಲೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಸಿದಾಗ ಇದಕ್ಕೆ ಸಂಬಂಧಪಟ್ಟಹಲವು ಫೋಟೋಗಳು ಲಭ್ಯವಾಗಿವೆ. ವೈರಲ್ ಆಗಿರುವ ಫೋಟೋದಲ್ಲಿರುವ ಅಸ್ಥಿಪಂಜರವು 28 ಮೀಟರ ಉದ್ದವಿದ್ದು, ಇಟಲಿಯ ಕಲಾವಿದ ಗಿನೋ ಡೇ ಡೊಮಿನಿಕ್ಸ್ ಅವರ ಕೈಚಳಕದಲ್ಲಿ ಮೂಡಿಬಂದ ಕಲಾಕೃತಿ ಇದಾಗಿದೆ.
‘ಮೈ ಮಾಡರ್ನ್ ಮೆಟ್’ ಎಂಬ ವೆಬ್‌ಸೈಟ್‌ನಲ್ಲಿ 2012ರಲ್ಲಿಯೇ ಈ ಕುರಿತು ವರದಿ ಮಾಡಲಾಗಿದೆ. ಅದರಲ್ಲಿ ಈ ಅಸ್ಥಿಪಂಜರವು 28 ಮೀಟರ್ ಉದ್ದವಿದ್ದು, ಸುಮಾರು 8 ಟನ್ ಭಾರವಿದೆ ಎಂದು ಹೇಳಲಾಗಿದೆ. ಜೊತೆಗೆ ಡೊಮಿನಿಕ್ಸ್ 1998ರಲ್ಲಿ ಮೃತಪಟ್ಟಿದ್ದು, ಇಹಲೋಕ ತ್ಯಜಿಸುವ ಕೆಲವೇ ದಿನಗಳ ಮುಂಚೆ ಈ ಕಾರ‍್ಯವನ್ನು ಪೂರ್ಣಗೊಳಿಸಿದ್ದರು ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.