Fact Check: ಮೈತುಂಬ ಆಭರಣ ಧರಿಸಿ ನಿಂತ್ರಾ ಸ್ಟಾಲಿನ್ ಮೊಮ್ಮಗ?

Published : Jul 30, 2019, 09:21 AM IST
Fact Check: ಮೈತುಂಬ ಆಭರಣ ಧರಿಸಿ ನಿಂತ್ರಾ ಸ್ಟಾಲಿನ್ ಮೊಮ್ಮಗ?

ಸಾರಾಂಶ

ಮೈತುಂಬಾ ಆಭರಣ ಧರಿಸಿರುವ ಹುಡುಗ ತಮಿಳುನಾಡಿನ ದ್ರಾಮಿಡ ಮುನ್ನೇತರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ.ಕೆ ಸ್ಟಾಲಿನ್‌ ಮೊಮ್ಮಗ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಏನಿದು ಸುದ್ದಿ? ಏನಿದರ ಸತ್ಯಾಸತ್ಯತೆ? 

ಮೈತುಂಬಾ ಆಭರಣ ಧರಿಸಿರುವ ಹುಡುಗ ತಮಿಳುನಾಡಿನ ದ್ರಾಮಿಡ ಮುನ್ನೇತರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ.ಕೆ ಸ್ಟಾಲಿನ್‌ ಮೊಮ್ಮಗ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತುಷಾರ್‌ ನಟರಾಜನ್‌ ಎಂಬುವವರು ತರುಣನೊಬ್ಬನ ಫೋಟೋವನ್ನು ಪೋಸ್ಟ್‌ ಮಾಡಿ, ಮೈತುಂಬಾ ಚಿನ್ನಾಭರಣ ಧರಿಸಿರುವ ಈ ಹುಡುಗ ತಮಿಳುನಾಡಿನ ಡಿಎಂಕೆ ಅಧ್ಯಕ್ಷ ಸ್ಟಾಲಿನ್‌ ಮೊಮ್ಮಗ ಎಂದು ಹೇಳಿದ್ದಾರೆ. ‘ನ್ಯೂ ಇಂಡಿಯಾ’ ಫೇಸ್‌ಬುಕ್‌ ಪೇಜ್‌ ಕೂಡ ಇದೇ ಪೋಟೋವನ್ನು ಪೋಸ್ಟ್‌ ಮಾಡಿದೆ. ಇದು 400 ಬಾರಿ ಶೇರ್‌ ಆಗಿದೆ.

ಈ ಸುದ್ದಿ ನಿಜವೇ ಎಂದು ಪರಿಶೀಲಿಸಲು ಇಂಡಿಯಾ ಟುಡೇ ಆ್ಯಂಟಿ ಫೇಕ್‌ ನ್ಯೂಸ್‌ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಪಂಧಾರ್ಕರ್‌ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಇದೇ ಫೋಟೋ ಇರುವುದು ಪತ್ತೆಯಾಗಿದೆ. ಈ ಇನ್‌ಸ್ಟಾಗ್ರಾಂ ಪೇಜನ್ನು 52,000 ಜನರು ಫಾಲೋ ಮಾಡುತ್ತಿದ್ದಾರೆ.

ಇದಲ್ಲದೆ ಹಲವು ಚಿತ್ರಗಳಲ್ಲಿ ಈತ ಆಭರಣಗಳನ್ನು ಧರಿಸಿದ್ದು, ಅಕ್ಕಪಕ್ಕದ್ದಲ್ಲಿ ಭದ್ರತಾ ಸಿಬ್ಬಂದಿ ನಿಂತಿರುವ ಫೋಟೋಗಳೂ ಲಭ್ಯವಾಗಿವೆ. ಪಂದಾರ್ಕರ್‌ ಅವರ ಹಲವು ಫೋಟೋಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಈತ ಸ್ಟಾಲಿನ್‌ ಮೊಮ್ಮಗನಲ್ಲ. ಸ್ಟಾಲಿನ್‌ ಮೊಮ್ಮಗನ ಫೋಟೋಗಳು ಇಂಟರ್‌ನೆಟ್‌ನಲ್ಲಿ ಲಭ್ಯವಿಲ್ಲ.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್
ಬೆಂಗಳೂರಿಗಾಗಿ ಶ್ರಮಿಸಿದೆವು ಆದ್ರೂ ತಮ್ಮನನ್ನು ಸೋಲಿಸಿದ್ರಿ: ಅಪಾರ್ಟ್‌ಮೆಂಟ್‌ ನಿವಾಸಿಗಳ ವಿರುದ್ಧ ಕಿಡಿಯಾದ ಡಿಕೆಶಿ