
ದೇಶದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶವನ್ನು ಮೂರು ಭಾಗಗಳನ್ನಾಗಿ ಮಾಡಲಾಗುತ್ತದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯಾವ ಜಿಲ್ಲೆಗಳು ಯಾವ ರಾಜ್ಯಕ್ಕೆ ಸೇರಿವೆ ಎಂಬ ವಿವರವನ್ನು ಒಳಗೊಂಡ ಫೋಟೋದೊಂದಿಗೆ, ‘ಉತ್ತರ ಪ್ರದೇಶ ಮೂರು ಭಾಗವಾಗಲಿದೆ.
Fact Check: ಕಾಶ್ಮೀರದ ಕಾಡುನಾಶ ಮಾಡಿ, ಪೀಠೋಪಕರಣ ಮಾಡಿಸಿದ್ರಾ ಓಮರ್ ಅಬ್ದುಲ್ಲಾ?
ಮೊದಲ ರಾಜ್ಯ ಉತ್ತರ ಪ್ರದೇಶ ಅದರ ರಾಜಧಾನಿ ಲಖನೌ. ಎರಡನೇ ರಾಜ್ಯ ಬುಂದೇಲ್‌ಖಂಡ್, ಅದರ ರಾಜಧಾನಿ ಪ್ರಯಾಗ್‌ರಾಜ್. ಮೂರನೇ ರಾಜ್ಯ ಪೂರ್ವಾಂಚಲ್, ಅದರ ರಾಜಧಾನಿ ಗೋರಖ್‌ಪುರ ಎಂದು ಹೇಳಲಾಗಿದೆ. ಶಿವರಾಜ್ ವಿಶ್ವಕರ್ಮ ಎಂಬವರು ತಮ್ಮ ಟ್ವೀಟರ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ಇದೀಗ ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ವೈರಲ್ ಆಗುತ್ತಿದೆ.
Fact Check: 125 ಕೆ.ಜಿ ಚಿನ್ನಾಭರಣ ಧರಿಸಿರುವ ತಿರುಪತಿ ದೇವಾಲಯದ ಪೂಜಾರಿ?
ಆದರೆ ನಿಜಕ್ಕೂ ಉತ್ತರ ಪ್ರದೇಶ ಮೂರು ಭಾಗವಾಗುತ್ತಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಆಲ್ಟ್‌ನ್ಯೂಸ್ ಈ ಬಗ್ಗೆ ಹುಡುಕಹೊರಟಾಗ ಉತ್ತರ ಪ್ರದೇಶವನ್ನು ಮೂರು ಭಾಗ ಮಾಡುವ ಯಾವುದೇ ಪ್ರಸ್ತಾಪಗಳ ಬಗ್ಗೆಯೂ ವರದಿ ಲಭ್ಯವಾಗಿಲ್ಲ.
ಯುಪಿಯನ್ನು ಹಲವು ಭಾಗ ಮಾಡುವ ಮೊದಲ ಪ್ರಸ್ತಾಪ ಕೇಳಿಬಂದಿದ್ದು 2011 ರಲ್ಲಿ. ಆಗ ಬಿಎಸ್‌ಪಿ ಸರ್ಕಾರವಿತ್ತು. ರಾಜ್ಯ ವಿಧಾನಸಭೆಯಲ್ಲಿ ಇಂಥದ್ದೊಂದು ಪ್ರಸ್ತಾಪ ಮಾಡಿ, ಪರಿಶೀಲನೆಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಆಗಿನ ಯುಪಿಎ ಸರ್ಕಾರ ಇದಕ್ಕೆ ಸಮ್ಮತಿ ನೀಡಿರಲಿಲ್ಲ. 2013 ರಲ್ಲಿಯೂ ಇಂಥದ್ದೊಂದು ಪ್ರಸ್ತಾಪ ಮತ್ತೆ ಕೇಳಿ ಬಂದಿತ್ತು. ಅಲ್ಲದೆ ಈ ಬಗ್ಗೆ ಯುಪಿ ಸರ್ಕಾರದ ಮಾಧ್ಯಮ ಸಲಹೆಗಾರರೊಬ್ಬರು ಸ್ಪಷ್ಟನೆ ನೀಡಿ ‘ಯುಪಿಯನ್ನು ಒಡೆಯುವ ಯಾವ ಪ್ರಸ್ತಾಪವೂ ಇಲ್ಲ . ಇದೊಂದು ಸುಳ್ಳುಸುದ್ದಿ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.