ನಟ ಅಮಿತಾಭ್ ಬಚ್ಚನ್‌ಗೆ ದಾದಾ ಸಾಹೇಬ್ ಫಾಲ್ಕೆ ಗರಿ

By Web DeskFirst Published Sep 25, 2019, 10:57 AM IST
Highlights

ಭಾರತೀಯ ಸಿನಿಮಾ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ನವದೆಹಲಿ (ಸೆ. 25): ಭಾರತೀಯ ಸಿನಿಮಾ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು, ಸಿನಿಮಾ ರಂಗದ ಮೂಲಕ ರಂಜಿಸಿದ ಮತ್ತು ಹಲವರಿಗೆ ಸ್ಫೂರ್ತಿಯಾದ ಅಮಿತಾಭ್ ಬಚ್ಚನ್ ಅವರನ್ನು ಅವಿರೋಧವಾಗಿ ಭಾರತೀಯ ಸಿನಿಮಾ ರಂಗದ ಅತ್ಯುನ್ನತ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಕುರಿತು ಭಾರತ ದೇಶ ಹಾಗೂ ವಿಶ್ವ ಸಮುದಾಯವೇ ಹೆಮ್ಮೆ ಹಾಗೂ ಹರ್ಷ ವ್ಯಕ್ತಪಡಿಸಿದೆ. ಇದಕ್ಕಾಗಿ ನನ್ನ ಹೃದಯಸ್ಪರ್ಶಿ ಅಭಿನಂನೆಗಳು ಎಂದು ತಿಳಿಸಿದ್ದಾರೆ. 1969 ರಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಅಮಿತಾಭ್ ನಂತರದ ೫ ದಶಕಗಳಲ್ಲಿ 190 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಜಂಝೀರ್, ದೀವಾರ್, ಆನಂದ್, ಶೋಲೆ, ಡಾನ್, ಕೂಲಿ, ಶರಾಬಿ, ಅಮರ್ ಅಕ್ಬರ್ ಅಂತೋಣಿ, ಮೊದಲಾದ ಚಿತ್ರಗಳ ಮೂಲಕ 70 ರ ದಶಕದಲ್ಲಿ ಬಾಲಿವುಡ್‌ನ ಆ್ಯಂಗ್ರಿ ಯಂಗ್‌ಮನ್ ಎಂದೇ ಖ್ಯಾತರಾದರು.

2000 ನೇ ಇಸವಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ನಿರೂಪಕರಾಗಿ ಮತ್ತಷ್ಟು ಜನಪ್ರಿಯತೆ ಗಳಿಸಿದರು. ಅಲ್ಲದೆ, ತಮ್ಮ ಅಭಿನಯಕ್ಕಾಗಿ ಹಲವು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಬಂದಿವೆ. 

 

click me!