Fact Check: 2000 ರೂ ನೋಟು ನಿಷೇಧವಾಗುತ್ತಾ?

By Web DeskFirst Published Oct 7, 2019, 10:03 AM IST
Highlights

ಆರ್‌ಬಿಐ 2000 ರು. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ವಾಪಸ್‌ ಪಡೆದು, ಮತ್ತೆ 1000 ರು. ಮುಖಬೆಲೆಯ ನೋಟುಗಳನ್ನು ಜಾರಿ ಮಾಡಲಿದೆ ಎಂಬ ಸಂದೇಶ ಸೋಷಿಯಲ್‌ ಮಿಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಆರ್‌ಬಿಐ 2000 ರು. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ವಾಪಸ್‌ ಪಡೆದು, ಮತ್ತೆ 1000 ರು. ಮುಖಬೆಲೆಯ ನೋಟುಗಳನ್ನು ಜಾರಿ ಮಾಡಲಿದೆ ಎಂಬ ಸಂದೇಶ ಸೋಷಿಯಲ್‌ ಮಿಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. 2000 ರು. ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸಲು ಆರ್‌ಬಿಐ 10 ದಿನಕ್ಕೆ 50000 ರು. ಮಿತಿ ಹೇರಲಿದೆ ಎಂದು ಹೇಳಲಾಗಿದೆ.

ಈ ಕುರಿತ ಪೂರ್ಣ ಸಂದೇಶ ಹೀಗಿದೆ; ‘ಭಾರತೀಯ ರಿಸವ್‌ರ್‍ ಬ್ಯಾಂಕ್‌ 2000 ಮುಖಬೆಲೆಯ ಎಲ್ಲಾ ನೋಟುಗಳನ್ನು ವಾಪಸ್‌ ಪಡೆಯಲಿದೆ. ಆದರೆ ನೀವು 10 ದಿನದಲ್ಲಿ ಕೇವಲ 50000 ರು.ವನ್ನು ಮಾತ್ರ ವಾಪಸ್‌ ಮಾಡಬಹುದು. ಹಾಗಾಗಿ ಈಗಿನಿಂದಲೇ 2000 ರು. ನೂಟುಗಳನ್ನು ದಾಟಿಸಲು ಆರಂಭಿಸಿ. ಇದೇ ಅಕ್ಟೋಬರ್‌ 10ರ ನಂತರ ನಿಮ್ಮ 2000 ರು. ನೋಟನ್ನು ಯಾರೂ ತೆಗೆದುಕೊಳ್ಳುವುದಿಲ್ಲ’ ಎಂದಿದೆ.

Fact Check ಭೂಗತ ಪಾತಕಿ ಚೋಟಾ ರಾಜನ್ ನೊಂದಿಗೆ ನರೇಂದ್ರ ಮೋದಿ!

ಆದರೆ ಈ ಸುದ್ದಿಯ ಹಿಂದಿನ ಸತ್ಯಾಸತ್ಯ ಏನೆಂದು ಕ್ವಿಂಟ್‌ ಸುದ್ದಿಸಂಸ್ಥೆಯು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಆರ್‌ಬಿಐ ಈ ಬಗ್ಗೆ ಯಾವುದೇ ಪ್ರಕಟಣೆಯನ್ನೂ ಹೊರಡಿಸಿಲ್ಲ. ಅಲ್ಲದೆ ಅಂತಹ ಯೋಚನೆಯೂ ಆರ್‌ಬಿಐ ಮುಂದಿಲ್ಲ. ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದರೆ ಸಾಕು ಇದು ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ.

ಅಲ್ಲದೆ ಆರ್‌ಬಿಐ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಆರ್‌ಬಿಐ ಈ ಬಗ್ಗೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ದಯವಿಟ್ಟು ಇಂಥ ಸುಳ್ಳುಸುದ್ದಿಗಳನ್ನು ನಂಬಬೇಡಿ’ ಎಂದಿದೆ. ಈ ರೀತಿಯ ಸುದ್ದಿ ಹೊಸತೇನಲ್ಲ. ಏಕೆಂದರೆ ಈ ಹಿಂದೆಯೂ ಅನೇಕ ಬಾರಿ ಸೋಷಿಯಲ್‌ ಮೀಡಿಯಾಗಳಲ್ಲಿ ಇಂಥ ಸುಳ್ಳುಸುದ್ದಿಗಳನ್ನು ಹರಡಲಾಗುತ್ತಿದೆ.

- ವೈರಲ್ ಚೆಕ್ 

click me!