ಪಾಕ್‌ ಮಾಜಿ ಸರ್ವಾಧಿಕಾರಿ ಮತ್ತೆ ಸಕ್ರಿಯ ರಾಜಕೀಯಕ್ಕೆ!

By Web Desk  |  First Published Oct 7, 2019, 9:11 AM IST

ಪಾಕ್‌ ಮಾಜಿ ಸರ್ವಾಧಿಕಾರಿ ಮತ್ತೆ ಸಕ್ರಿಯ ರಾಜಕೀಯಕ್ಕೆ| ದುಬೈನಿಂದಲೇ ವಿಡಿಯೋ ಕಾನ್ಫರೆನ್ಸ್‌ನಿಂದ ಅಭಿಮಾನಿಗಳ ಜತೆ ಮಾತುಕತೆ| ರಾಜಕೀಯ ಮುನ್ನೆಲೆಗಾಗಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ ಮುಷರ್ರಫ್‌| 2013ರಲ್ಲಿ ದಾಖಲಾದ ಮುಷರ್ರಫ್‌ ವಿರುದ್ಧದ ದೇಶದ್ರೋಹ ಕೇಸ್‌ ವಿಚಾರಣೆಗೆ ಬಾಕಿ


ಇಸ್ಲಾಮಾಬಾದ್‌[ಅ.07]: ಅನಾರೋಗ್ಯ ಕಾರಣದಿಂದಾಗಿ ರಾಜಕೀಯದಿಂದ ಹಿಂದೆ ಸರಿದಿದ್ದ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್‌ ಮುಷರ್ರಫ್‌ ಮತ್ತೆ ರಾಜಕೀಯ ಮುನ್ನೆಲೆಗೆ ಬರಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯ ಸಾಧನೆಗಾಗಿ ತಮ್ಮ ಆಲ್‌ ಪಾಕಿಸ್ತಾನ ಮುಸ್ಲಿಂ ಲೀಗ್‌(ಎಪಿಎಂಲ್‌) ಪಕ್ಷವನ್ನು ಪುನಶ್ಚೇತನಗೊಳಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ದೇಶದ್ರೋಹ ಕೇಸ್‌ ಎದುರಿಸುತ್ತಿರುವ ಮುಷರ್ರಫ್‌ ಎಪಿಎಂಎಲ್‌ ಸಂಸ್ಥಾಪನಾ ದಿನದ ಅಂಗವಾಗಿ ದುಬೈನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಇತ್ತೀಚೆಗಷ್ಟೇ ಮಾತನಾಡಿದ ಎಪಿಎಂಲ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಮೆಹ್ರೀನ್‌ ಮಲಿಕ್‌, ‘ಕಳೆದ ತಿಂಗಳು 12 ದಿನಗಳ ಕಾಲ ಮುಷರ್ರಫ್‌ ಲಂಡನ್‌ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದು, ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶೀಘ್ರವೇ ದುಬೈಗೆ ಆಗಮಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

Tap to resize

Latest Videos

2007ರಲ್ಲಿ ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದ ಮುಷರ್ರಫ್‌ ಸಂವಿಧಾನವನ್ನು ಅಮಾನತಿಲ್ಲಿಟ್ಟಿದ್ದರು. ಈ ಮೂಲಕ ದೇಶದ ಹಲವು ನ್ಯಾಯಾಲಯಗಳ ನ್ಯಾಯಾಧೀಶರನ್ನು ಗೃಹಬಂಧನದಲ್ಲಿಟ್ಟರು. ಜೊತೆಗೆ, ನೂರಕ್ಕೂ ಹೆಚ್ಚು ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಿದ್ದರು. ಈ ಸಂಬಂಧ 2013ರಲ್ಲಿ ಆಗಿನ ಪಾಕಿಸ್ತಾನ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ನೇತೃತ್ವದ ಸರ್ಕಾರ, ಮುಷರ್ರಫ್‌ ವಿರುದ್ಧ ದೇಶದ್ರೋಹ ಕೇಸ್‌ ದಾಖಲಿಸಿಕೊಂಡಿತ್ತು. ಏತನ್ಮಧ್ಯೆ, 2016ರಲ್ಲಿ ಅನಾರೋಗ್ಯದ ಚಿಕಿತ್ಸೆಗಾಗಿ ಮುಷರ್ರಫ್‌ ಪಾಕಿಸ್ತಾನದಿಂದ ದುಬೈಗೆ ಹಾರಿದ್ದ.

click me!