ಹಿಮಾಲಯದಲ್ಲಿ 36 ವರ್ಷಕ್ಕೊಮ್ಮೆ ಅರಳುವ ನಾಗಪುಷ್ಪ ಪತ್ತೆ!

Published : Aug 20, 2019, 09:08 AM IST
ಹಿಮಾಲಯದಲ್ಲಿ 36 ವರ್ಷಕ್ಕೊಮ್ಮೆ ಅರಳುವ ನಾಗಪುಷ್ಪ ಪತ್ತೆ!

ಸಾರಾಂಶ

ಹಿಮಾಲಯದಲ್ಲಿ ಮಾತ್ರ ಕಾಣಬರುವ 36 ವರ್ಷಗಳಿಗೊಮ್ಮೆ ಅರಳುವ ಅಪರೂಪದ ‘ನಾಗಪುಷ್ಪ’ ಹೂವು ಈ ವರ್ಷ ಅರಳಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ. 

ಹಿಮಾಲಯದಲ್ಲಿ ಮಾತ್ರ ಕಾಣಬರುವ 36 ವರ್ಷಗಳಿಗೊಮ್ಮೆ ಅರಳುವ ಅಪರೂಪದ ‘ನಾಗಪುಷ್ಪ’ ಹೂವು ಈ ವರ್ಷ ಅರಳಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

3 ದಶಕಗಳಿಗೊಮ್ಮೆ ಅರಳುವ ಈ ಅಪರೂಪದ ನಾಗಪುಷ್ಪ ಹೂವು ಹಿಮಾಲಯದ ಮಾನಸ ಸರೋವರದಲ್ಲಿ ಮುಂಜಾನೆ 3:30ಕ್ಕೆ ಅರಳಿದೆ ಎಂದು ಒಕ್ಕಣೆ ಬರೆದು, ಎದ್ದು ನಿಂತ ಹಾವಿನ ಹೆಡೆಯ ರೀತಿ ಕಾಣುವ ಬಿಳಿ ಮತ್ತು ತಿಳಿ ಗುಲಾಬಿ ಬಣ್ಣದ ಫೋಟೋವನ್ನು ಅಪ್‌ಲೋಡ್‌ ಮಾಡಲಾಗಿದ್ದು, ಸದ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆದರೆ ನಿಜಕ್ಕೂ ಇದು ನಾಗಪುಷ್ಪವೇ? ಅಥವಾ 36 ವರ್ಷಗಳಿಗೊಮ್ಮೆ ಅರಳುವ ಹೂವು ಹೌದೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ವೈರಲ್‌ ಆಗಿರುವ ಫೋಟೋದಲ್ಲಿರುವುದು ಹೂವೇ ಅಲ್ಲ, ಸಮುದ್ರದಾಳದಲ್ಲಿ ವಾಸಿಸುವ ಜೀವಿ ಎಂದು ತಿಳಿದುಬಂದಿದೆ. ಅಲ್ಲದೆ 2013ರಿಂದಲೂ ಈ ಫೋಟೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಾಸ್ತವವಾಗಿ ಇದೊಂದು ಹೂವಲ್ಲ. ಸಮುದ್ರದ ಆಳದಲ್ಲಿ ಕಂಡುಬರುವ ಅಕಶೇರುಕ ಜೀವಿ. ಇದನ್ನು ‘ಸೀ ಪೆನ್‌’ ಎಂದು ಕರೆಯಲಾಗುತ್ತದೆ. ಇವುಗಳು ಮೃದು ಹವಳದ ರೀತಿಯೇ ಇರುತ್ತವೆ. ಅಪಾಯದ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಕುಗ್ಗುವ ಗುಣವನ್ನು ಹೊಂದಿರುತ್ತವೆ. ಅಲ್ಲದೆ ವೈರಲ್‌ ಆಗಿರುವ ಸಂದೇಶದಲ್ಲಿ ‘ನಾಗಪುಷ್ಪ’ ಎಂಬ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಬರೆಯಲಾಗಿದೆ. ಒಟ್ಟಾರೆ ನಾಗಪುಷ್ಪ ಎಂದು ವೈರಲ್‌ ಆಗಿರುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು