
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕುರಿತ ಅನೇಕ ಸುಳ್ಳು ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡುತ್ತವೆ. ಸದ್ಯ ನಾಸಾ ಬಳಿ ‘ಕ್ಲೌಂಡ್ ಜನರೇಟಿಂಗ್ ಮಶೀನ್’ ಇದೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆ ವಿಡಿಯೋದಲ್ಲಿ ಮಶೀನ್‌ವೊಂದರಿಂದ ಕೃತಕ ಮೋಡ ಹೊರಬರುವಂತೆ ಕಾಣುವ ದೃಸ್ಯವಿದೆ. ಈ ವಿಡಿಯೋದೊಂದಿದೆ, ‘ಕೃತಕ ಕ್ಲೌಡ್ ಜನರೇಟಿಂಗ್ ಸಿಸ್ಟಮ್’ ಎಂದು ಬರೆದು ಶೇರ್ ಮಾಡಲಾಗುತ್ತಿದೆ. ಈ ವಿಡಿಯೋ 3 ಲಕ್ಷಕ್ಕೂ ಅಧಿಕ ಬಾರಿ ಶೇರ್ ಆಗಿದೆ. ಆದರೆ ನಿಜಕ್ಕೂ ನಾಸಾ ಇಂಥದ್ದೊಂದು ತಂತ್ರಜ್ಞಾನವನ್ನು ಶೋಧಿಸಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.
ವಾಸ್ತವವಾಗಿ ನಾಸಾ 2018 ಫೆಬ್ರವರಿ 21ರಂದು ಶಕ್ತಿಶಾಲಿಯಾದ ಆರ್‌ಎಸ್-25 ಎಂಜಿನ್ ಅನ್ನು ಮೆಸಿಸಿಪ್ಪಿಯ ಸ್ಟೆನ್ನಿ ಬಾಹ್ಯಾಕಾಶ ಕೇಂದ್ರದಲ್ಲಿ ಪರೀಕ್ಷಿಸಿತ್ತು. 2015ರಿಂದಲೂ ಈ ಎಂಜಿನ್ ಅನ್ನು ನಾಸಾ ಸಿದ್ಧಪಡಿಸುತ್ತಿದೆ. ಎಸ್‌ಎಲ್‌ಎಸ್ ರಾಕೆಟ್ ಉಡಾವಣೆಗೆ ಈ ಎಂಜಿನ್ ಬಳಕೆಯಾಗಲಿದೆ.
ಎಂಜಿನ್ ತನ್ನಲ್ಲಿರುವ ದ್ರವ ಹೈಡ್ರೋಜನ್ ಮತ್ತು ಲಿಕ್ವಿಡ್ ಆಮ್ಲಜನಕವನ್ನು ಬರ್ನ್ ಮಾಡುತ್ತದೆ. ಅವೆರಡೂ ಒಟ್ಟು ಸೇರಿ ಎಚ್2ಒ ಉತ್ಪತ್ತಿಯಾಗುತ್ತದೆ. ಹಾಗಾಗಿ ವಿಡಿಯೋದಲ್ಲಿ ಲ್ಲಿ ಕಾಣುವ ಮೋಡವು, ವೈಜ್ಞಾನಿಕ ಪ್ರಕ್ರಿಯೆಯ ಉಪ-ಉತ್ಪನ್ನಗಳು ಅಷ್ಟೆ. ಆರ್‌ಎಸ್-25 ಸಂಪೂರ್ಣವಾಗಿ ಬರ್ನ್ ಆದಾಗ ನೀರಿನ ಆವಿಯಾಗಿ ಘನೀಕೃತಗೊಳ್ಳುತ್ತದೆ. ಅದು ಮಳೆಯಾಗಿ ಬೀಳುವಷ್ಟುದೊಡ್ಡ ಹನಿಗಳನ್ನು ರೂಪಿಸಬಹುದು.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.