Fact Check: ಪಾಕ್‌ ಜೊತೆ ಸೇರಿ ಡೇಂಜರಸ್‌ ಪಟಾಕಿಗಳನ್ನು ಭಾರತಕ್ಕೆ ಕಳಿಸ್ತಿದೆಯಾ ಚೀನಾ?

By Kannadaprabha NewsFirst Published Aug 23, 2019, 10:58 AM IST
Highlights

ಅಪಾಯಕಾರಿ ವಸ್ತುಗಳನ್ನು ಭಾರತದ ಮಾರುಕಟ್ಟೆಗೆ ಕಳುಹಿಸಿ ಭಾರತದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಚೀನಾ ಮತ್ತು ಪಾಕಿಸ್ತಾನ ಪ್ಲಾನ್‌ ಮಾಡಿವೆ. ಈ ಬಗ್ಗೆ ಗೃಹ ಸಚಿವಾಲಯ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರುಲು ಹೇಳಿದೆ ಎನ್ನುವ ಪತ್ರವೊಂದು ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಅಪಾಯಕಾರಿ ವಸ್ತುಗಳನ್ನು ಭಾರತದ ಮಾರುಕಟ್ಟೆಗೆ ಕಳುಹಿಸಿ ಭಾರತದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಚೀನಾ ಮತ್ತು ಪಾಕಿಸ್ತಾನ ಪ್ಲಾನ್‌ ಮಾಡಿವೆ. ಈ ಬಗ್ಗೆ ಗೃಹ ಸಚಿವಾಲಯ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರುಲು ಹೇಳಿದೆ ಎನ್ನುವ ಪತ್ರವೊಂದು ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆ ಪತ್ರದಲ್ಲಿ, ‘ಸಂವಿಧಾನದ ಕಲಂ-370 ರದ್ದಾದ ಬಳಿಕ ಹತಾಶೆಗೊಂಡಿರುವ ಪಾಕಿಸ್ತಾನ, ಚೀನಾದ ಸಹಾಯ ಪಡೆದು ಭಾರತದ ಶಾಂತಿ ಕದಡಲು ಮುಂದಾಗಿದೆ. ಚೀನಾದಿಂದ ತಯಾರಾದ ಪಟಾಕಿಗಳನ್ನು ಭಾರತದ ಮಾರುಕಟ್ಟೆಯೊಳಗೆ ಬಿಡಲಾಗಿದೆ. ಅವುಗಳ ಹೊಗೆಯು ಅಸ್ತಮಾಗೆ ಕಾರಣವಾಗುತ್ತದೆ. ಅಲ್ಲದೆ ಈ ಪಟಾಕಿಗಳು ಕಾರ್ಬನ್‌ ಮೋನಾಕ್ಸೈಡನ್ನು ಬಿಡುಗಡೆ ಮಾಡುವುದರಿಂದ ಇದು ಉಸಿರಾಟಕ್ಕೆ ತೊಂದರೆಯುಂಟು ಮಾಡುತ್ತದೆ.

ಅದರ ಜೊತೆಗೆ ಚೀನಾ ಆಕರ್ಷಕ ಕಲರ್‌ ಬಲ್ಬ್ಗಳನ್ನೂ ಉತ್ಪಾದಿಸುತ್ತಿದೆ. ಈ ಬಲ್ಬುಗಳು  ಬಿಡುಗಡೆ ಮಾಡುವ ವಿಕಿರಣಗಳು ಕಣ್ಣಿಗೆ ಅಪಾಯಕಾರಿ. ಕ್ರಿಸ್‌ಮಸ್‌, ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಈ ವಸ್ತುಗಳನ್ನು ಭಾರತದ ಮಾರುಕಟ್ಟೆಗೆ ಸೇರಿಸಿ ಅಪಾಯ ಸೃಷ್ಟಿಸುವುದು ಚೀನಾ ಪ್ಲಾನ್‌’ ಎಂದು ಹೇಳಲಾಗಿದೆ. ಅದರ ಕೆಳಗೆ ಗೃಹ ಇಲಾಖೆಯ ಹಿರಿಯ ತನಿಖಾಧಿಕಾರಿ ಎಂದು ಬಿಸ್ವಂತ್‌ ಮುಖರ್ಜಿ ಎಂಬ ಹೆಸರಿದೆ.

ಇದರ ಸತ್ಯಾಸತ್ಯ ಪರಿಶೀಲನೆಗೆ ಬೂಮ್‌ ಗೃಹ ಇಲಾಖೆಯ ಮೂಲಗಳಿಂದ ಸ್ಪಷ್ಟನೆ ಪಡೆದಿದ್ದು, ಅವರು ಇಂಥದ್ದೊಂದು ಪ್ರಕಟಣೆ ಬಗ್ಗೆ ಅರಿವೇ ಇಲ್ಲ ಎಂದಿದ್ದಾರೆ. ಅಲ್ಲದೆ ಮುಖರ್ಜಿ ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಕಾನೂನು ಅಧಿಕಾರಿ. ಅವರೂ ಕೂಡ ಈ ಪ್ರಕಟಣೆ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

 - ವೈರಲ್ ಚೆಕ್ 

click me!