ವೈನಾಡಿನಲ್ಲಿ ರಾಹುಲ್ ಎದುರು ಪರಾಭವಗೊಂಡಿದ್ದ ಅಭ್ಯರ್ಥಿ ದುಬೈನಲ್ಲಿ ಸೆರೆ

Published : Aug 23, 2019, 10:06 AM IST
ವೈನಾಡಿನಲ್ಲಿ ರಾಹುಲ್ ಎದುರು ಪರಾಭವಗೊಂಡಿದ್ದ  ಅಭ್ಯರ್ಥಿ ದುಬೈನಲ್ಲಿ ಸೆರೆ

ಸಾರಾಂಶ

ಕೇರಳದ ವೈನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಬೆಂಬಲಿತ, ಭಾರತ್‌ ಧರ್ಮ ಜನ ಸೇನಾ ಪಕ್ಷದ ನಾಯಕ ತುಷಾರ್‌ ವೆಲ್ಲಪಳ್ಳಿ ಅವರನ್ನು 19 ಕೋಟಿ ರು. ವಂಚನೆ ಆರೋಪದ ಮೇಲೆ ದುಬೈನಲ್ಲಿ ಬಂಧಿಸಲಾಗಿದೆ. 

ತಿರುವನಂತಪುರ (ಆ. 23): ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಬೆಂಬಲಿತ, ಭಾರತ್‌ ಧರ್ಮ ಜನ ಸೇನಾ ಪಕ್ಷದ ನಾಯಕ ತುಷಾರ್‌ ವೆಲ್ಲಪಳ್ಳಿ ಅವರನ್ನು 19 ಕೋಟಿ ರು. ವಂಚನೆ ಆರೋಪದ ಮೇಲೆ ದುಬೈನಲ್ಲಿ ಬಂಧಿಸಲಾಗಿದೆ.

ದುಬೈನ ಅಜ್ಮಾನ್‌ನಲ್ಲಿದ್ದ ವೆಲ್ಲಪಳ್ಳಿಗೆ ಸಂಬಂಧಿಸಿದ ಕಂಪನಿಯೊಂದು ನಷ್ಟಉಂಟಾಗಿತ್ತು. ಹೀಗಾಗಿ ಗುತ್ತಿಗೆದಾರರಿಗೆ ಪರಿಹಾರ ರೂಪವಾಗಿ 19 ಕೋಟಿ ರು. ಚೆಕ್‌ ನೀಡಿದ್ದರು. ಚೆಕ್‌ ಬೌನ್ಸ್‌ ಆದ ಕಾರಣ ವೆಲ್ಲಪಳ್ಳಿ ವಿರುದ್ಧ ತ್ರಿಶೂರ್‌ನ ಎನ್‌. ಅಬ್ದುಲ್ಲಾ ಎಂಬುವವರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ.

ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ರಿಗೆ ಪತ್ರ ಬರೆದಿದ್ದು, ಸಹಾಯಕ್ಕೆ ಮನವಿ ಮಾಡಿದ್ದಾರೆ. ವೆಲ್ಲಪಳ್ಳಿಗೆ ಜಾಮೀನು ಸಿಕ್ಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತೀಯರ ಬಳಿ ಇದೆ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ: ಬಲಿಷ್ಠ ರಾಷ್ಟ್ರಗಳ ಜಿಡಿಪಿಯನ್ನೂ ಮೀರಿಸಿದ ಸಂಪತ್ತು
Post Office Scheme: ದಿನಕ್ಕೆ ₹300 ಉಳಿಸಿ, 10 ವರ್ಷದಲ್ಲಿ ₹15 ಲಕ್ಷ ನಿಮ್ಮದಾಗಿಸಿಕೊಳ್ಳಿ!