Fact Check: ಅಪಘಾತದಿಂದ ನಡುರಸ್ತೆಯಲ್ಲಿ ಒದ್ದಾಡುತ್ತಿದ್ದರೂ ಮಾನವೀಯತೆ ಮರೆತ್ರಾ ಜನ?

By Web DeskFirst Published Jul 4, 2019, 9:36 AM IST
Highlights

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ನಡು ರಸ್ತೆಯಲ್ಲಿ ನರಳಾಡುತ್ತಿದ್ದರೂ ಆತನ ಸಹಾಯಕ್ಕೆ ಧಾವಿಸುವ ಬದಲು ಜನ ಆಂಬ್ಯುಲೆನ್ಸ್‌ಗಾಗಿ ಎದುರು ನೋಡಿದ ಘಟನೆ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮಾನವೀಯತೆ ಮರೆತ ಸಾರ್ವಜನಿಕರ ನಡವಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ನಿಜನಾ ಈ ಸುದ್ದಿ? 

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ನಡು ರಸ್ತೆಯಲ್ಲಿ ನರಳಾಡುತ್ತಿದ್ದರೂ ಆತನ ಸಹಾಯಕ್ಕೆ ಧಾವಿಸುವ ಬದಲು ಜನ ಆಂಬ್ಯುಲೆನ್ಸ್‌ಗಾಗಿ ಎದುರು ನೋಡಿದ ಘಟನೆ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮಾನವೀಯತೆ ಮರೆತ ಸಾರ್ವಜನಿಕರ ನಡವಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ನಗರದ ಜುನæ ಬೆಳಗಾವಿ ನಿವಾಸಿ ವಿಜಯ ರಾಮಸುತಾರ ಯಾದವ (38) ಅವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬೆಳಗಾವಿ ನಗರದ ಎರಡನೇ ರೈಲ್ವೆ ಗೇಟ್‌ ಬಳಿ ಶುಕ್ರವಾರ ಸಂಜೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು.

ಈ ವೇಳೆ ನಡು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೂ ಘಟನೆಯನ್ನು ನೋಡಿದವರಲ್ಲಿ ಕೆಲವರು ಮಾನವೀಯತೆ ಮರೆತು ತಮಗೇನು ಸಂಬಂಧವಿಲ್ಲ ಎಂಬಂತæ ಸುಮ್ಮನೆ ಹೊರಟರೆ, ಇನ್ನೂ ಕೆಲವರು ಮೊಬೈಲನಲ್ಲಿ ವಿಡಿಯೋ ಮಾಡುತ್ತಾ ಆಂಬ್ಯುಲೆನ್ಸ್‌ಗಾಗಿ ಕಾಯುತ್ತಾ ಕಾಲಹರಣ ಮಾಡಿದ್ದರು.

ಅಲ್ಲದೆ, ಖಾಸಗಿ ವಾಹನ ಚಾಲಕರು ಗಾಯಗೊಂಡಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಹಿಂದೇಟು ಹಾಕಿದ್ದರು. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಗಾಯಗೊಂಡ ವ್ಯಕ್ತಿ ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- ವೈರಲ್ ಚೆಕ್ 

click me!