Fact Check: ನಿತ್ಯಾನಂದನ ಪಾದಕ್ಕೆ ಎರಗಿದ ಗೃಹ ಸಚಿವ ಅಮಿತ್ ಶಾ

By Suvarna News  |  First Published Dec 10, 2019, 6:19 PM IST

ನಿತ್ಯಾನಂದನ ಕಾಲಿಗೆ ಗೃಹ ಸಚಿವ ಅಮಿತ್ ಶಾ ಎರಗಿದ್ರಾ?/ ವೈರಲ್ ಪೋಟೋದ ಹಿಂದಿನ ಅಸಲಿಯತ್ತೇನು/ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಪೋಟೋ


ಬೆಂಗಳೂರು(ಡಿ. 10)  ಅತ್ಯಾಚಾರ ಪ್ರಕರಣ ಎದುರಿಸುತ್ತ ದೇಶ ಬಿಟ್ಟು ಪರಾರಿಯಾಗಿರುವ ಸ್ವಾಮಿ ನಿತ್ಯಾನಂದನ ಕಾಲಿಗೆ ದೊಡ್ಡ ವ್ಯಕ್ತಿಯೊಬ್ಬರು ಎರಗುತ್ತಿರುವ ಪೋಟೋ ವೈರಲ್ ಆಗಿದೆ.

ಪೋಟೋದಲ್ಲಿ ವ್ಯಕ್ತಿಯ ಮುಖ ಸರಿಯಾಗಿ ಕಾಣುತ್ತಿಲ್ಲ. ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ನಿತ್ಯಾನಂದನ ಕಾಲಿಗೆ ಎರಗುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಹೇಳುತ್ತಿದೆ.

Tap to resize

Latest Videos

ಈ ಸುದ್ದಿಯನ್ನು ಬೆನ್ನು ಹತ್ತಿದ ಮಾಧ್ಯಮಗಳಿಗರೆ ಉತ್ತರವೂ ಸಿಕ್ಕಿದೆ.. ನಿತ್ಯಾನಂದ ಕಾಲಿಗೆ ಎರಗುತ್ತಿರುವುದು ಅಮಿತ್ ಶಾ ಅಲ್ಲ ಎಂಬುದು ಸ್ಪಷ್ಟವಾಗಿದೆ. ನಿತ್ಯಾನಂದನಿಗೆ ನಮಸ್ಕಾರ ಮಾಡುತ್ತಿರುವವರು ಮಾರಿಶಸ್ ನ ಹೈ ಕಮಿಶನರ್ ಜಗದೀಶ್ವರ ಗೋವರ್ಧನ್ ಎಂಬುದು ಸ್ಪಷ್ಟವಾಗಿದೆ.

ನಿತ್ಯಾನಂದನ ಹೊಸ ದೇಶ ಕೈಲಾಸದಲ್ಲಿ ಏನೆಲ್ಲ ವ್ಯವಸ್ಥೆಗಳಿವೆ?

ಫೆಸ್ ಬುಕ್ ನಲ್ಲಿ ಸಬೀರ್ ರಾಜನ್ ಮೌಕಲ್ ಎಂಬುವರು ಈ ಚಿತ್ರವನ್ನು ಶೇರ್ ಮಾಡಿಕೊಂಡು ಅಮಿತ್ ಶಾ ನಿತ್ಯಾನಂದನ ಕಾಲಿಗೆ ಬಿದ್ದಿದ್ದಾರೆ ಎಂದು ಬರೆದುಕೊಂಡ ನಂತರ ಪೋಟೋ ವೈರಲ್ ಆಗಿದೆ.

ತಮಿಳಿನಲ್ಲಿ ಇದನ್ನೇ ಶೇರ್ ಮಾಡಿಕೊಂಡ ಕೃಷ್ಣವೇಲ್ ಟಿಎಸ್ ಎಂಬುವರ ಪೋಸ್ಟ್ 2700 ಕ್ಕೂ ಅಧಿಕ ಸಾರಿ ಶೇರ್ ಆಗಿದೆ. ನಿತ್ಯಾನಂದ ದೇಶ ಬಿಟ್ಟು ಓಡಿಹೋಗಿದ್ದಾನೆ. ದ್ವೀಪವೊಂದನ್ನು ಖರೀದಿ ಮಾಡಿ ತನ್ನದೇ ಸ್ವಂತ ದೇಶ ನಿರ್ಮಾಣ ಮಾಡಿಕೊಂಡಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಸಂದರ್ಭ ಈ ಸುದ್ದಿ ಪ್ರಾಮುಖ್ಯ ಪಡೆದುಕೊಂಡಿದೆ.

ಇದು ಹೈದರಾಬಾದ್ ಎನ್ ಕೌಂಟರ್ ನ ನಿಜವಾದ ಪೋಟೋಗಳಾ?

ಇದು ಜುಲೈ 9, 2017ರಲ್ಲಿ ತೆಗೆದ ಚಿತ್ರ ಎನ್ನುವುದು ಗೊತ್ತಾಗಿದೆ.  ಬೆಂಗಳೂರಿನ ನಿತ್ಯಾನಂದ ಪೀಠದಲ್ಲಿ ನಡೆದ ಗುರುಪೂರ್ಣಿಮೆ ದಿನ ತೆಗೆದ ಪೋಟೋಕ್ಕೆ ಅಮಿತ್ ಶಾ ಹೆಸರು ಸೇರಿಸಲಾಗಿದೆ.

click me!