![[ವೈರಲ್‌ಚೆಕ್] ಮೇಲ್ ಮಾಡಿದರೆ ಬಿಲ್‌ಗೇಟ್ಸ್’ರಿಂದ ನೂರಾರು ಡಾಲರ್ ಬಹುಮಾನ..?](https://static.asianetnews.com/images/w-412,h-232,imgid-3baae3b1-325d-4ae2-9209-915b8d72074c,imgname-image.jpg)
ವಾಷಿಂಗ್ಟನ್ : ಮೈಕ್ರೋಸಾಫ್ಟ್ ಎಂಬ ದೈತ್ಯ ಸಂಸ್ಥೆಯ ಸಂಸ್ಥಾಪಕ, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಬಿಲ್ ಗೇಟ್ಸ್ ಪ್ರತಿಯೊಬ್ಬರಿಗೂ ಕೋಟ್ಯಧಿಪತಿಯಾಗುವಂತಹ ಒಂದು ಅವಕಾಶವನ್ನು ನೀಡುತ್ತಿದ್ದಾರೆ.
ಅದಕ್ಕಾಗಿ ಮಾಡಬೇಕಿರುವುದು ಇಷ್ಟೆ: ಮೈಕ್ರೋಸಾಫ್ಟ್ ಕಳುಹಿಸುವ ಇ-ಮೇಲ್ ಅನ್ನು ನಿಮ್ಮ ಸ್ನೇಹಿತರಿಗೆ, ಪರಿಚಯಸ್ಥರಿಗೆ ಎಲ್ಲರಿಗೂ ಫಾರ್ವರ್ಡ್ ಮಾಡಿ, ಮೈಕ್ರೋಸಾಫ್ಟ್ ನಿಮಗೆ ಅದರ ಕ್ರೆಡಿಟ್ ನೀಡಲಿದೆ.
ಇ-ಮೇಲ್ ಅನ್ನು ಫಾರ್ವರ್ಡ್ ಮಾಡಿದ ಪ್ರತಿಯೊಬ್ಬರಿಗೂ ಮೈಕ್ರೋಸಾಫ್ಟ್ ನೂರಾರು ಡಾಲರ್ ಹಣವನ್ನು ನೀಡಲಿದೆ. ಈ ಸಂದೇಶ ನಕಲಿಯಲ್ಲ. ಬಿಲ್‌ಗೇಟ್ಸ್ ಬಳಿ ಸಾಕಷ್ಟುಹಣವಿದೆ, ಪ್ರಯೋಗಾತ್ಮಕ ಉದ್ದೇಶದಿಂದ ಇದನ್ನು ಅವರು ಮಾಡುತ್ತಿದ್ದಾರೆ ಎಂಬ ಸಂದೇಶ ಹರಿದಾಡುತ್ತಿದೆ.
ಆದರೆ ನಿಜಕ್ಕೂ ಬಿಲ್‌ಗೇಟ್ಸ್ ಇ-ಮೇಲ್ ಅನ್ನು ಫಾರ್ವರ್ಡ್ ಮಾಡಿದವರಿಗೆ ನೂರಾರು ಡಾಲರ್ ಹಣ ನೀಡುತ್ತಿದ್ದಾರೆಯೇ ಎಂದು ಹುಡುಕ ಹೊರಟಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸಂದೇಶ ಸುಳ್ಳು ಎಂದು ತಿಳಿದು ಬಂದಿದೆ.
ಖಾಸಗಿ ಸುದ್ದಿವಾಹಿನಿಯೊಂದು ನಡೆಸಿಕೊಡುವ ‘ಆಸ್ಕ್ ಮಿ ಎನಿಥಿಂಗ್’ ಕಾರ್ಯಕ್ರಮದಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಬಿಲ್‌ಗೇಟ್ಸ್, ಆ ರೀತಿ ಯಾವುದೇ ಸಂದೇಶವನ್ನೂ ಮೈಕ್ರೋಸಾಫ್ಟ್ ಕಂಪನಿ ನೀಡಿಲ್ಲ ಎಂದಿದ್ದಾರೆ. ಅಲ್ಲದೆ ಮೈಕ್ರೋಸಾಫ್ಟ್ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದವರ ಬಗ್ಗೆ ಯಾವುದೇ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ. ಈ ನಕಲಿ ಸಂದೇಶದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾದಲ್ಲಿ ವಿಷಾದಿಸುತ್ತೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.