Fact Check| ಚಂದ್ರಯಾನ-3ಕ್ಕೆ ‘ಮಿಷನ್‌ ಮಂಗಳ್‌’ ಸಂಭಾವಣೆ ಕೊಟ್ಟಅಕ್ಷಯ್‌!

Published : Sep 11, 2019, 09:55 AM ISTUpdated : Sep 11, 2019, 09:56 AM IST
Fact Check| ಚಂದ್ರಯಾನ-3ಕ್ಕೆ ‘ಮಿಷನ್‌ ಮಂಗಳ್‌’ ಸಂಭಾವಣೆ ಕೊಟ್ಟಅಕ್ಷಯ್‌!

ಸಾರಾಂಶ

 ಚಂದ್ರಯಾನ-3ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗುತ್ತಿದೆ. ಇಸ್ರೋನ ಈ ಯೋಜನೆಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಭಾರೀ ನೆರವು ನೀಡುತ್ತಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯ

ಮುಂಬೈ[ಸೆ.11]: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಇದರ ಬೆನ್ನಲ್ಲೇ ಚಂದ್ರಯಾನ-3ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗುತ್ತಿದೆ. ಇಸ್ರೋನ ಈ ಯೋಜನೆಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಭಾರೀ ನೆರವು ನೀಡುತ್ತಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್ ಚೆಕ್, ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈರಲ್‌ ಆಗಿರುವ ಸಂದೇಶದಲ್ಲಿ ಹೀಗಿದೆ; ‘ಚಂದ್ರಯಾನ-2ನಲ್ಲಿ ಭಾರತಕ್ಕೆ ಕೊಂಚ ಹಿನ್ನಡೆಯಾಗಿದೆ. ಆದರೆ ಚಂದ್ರಯಾನ-3ಗೆ ಇಸ್ರೋ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ನಟ ಅಕ್ಷಯ್‌ ಕುಮಾರ ಇತ್ತೀಚೆಗೆ ತಾವು ಅಭಿನಯಿಸಿದ್ದ ‘ಮಿಷನ್‌ ಮಂಗಳ್‌’ನಲ್ಲಿ ತಮಗೆ ಸಿಕ್ಕ ಅಷ್ಟೂಸಂಭಾವನೆಯನ್ನು ಈ ಯೋಜನೆಗಾಗಿ ಮೀಸಲಿಡುವುದಾಗಿ ಘೋಷಿಸಿದ್ದಾರೆ. ಎಲ್ಲಿ ಸಲ್ಮಾನ್‌, ಅಮೀರ್‌, ಶಾರುಖ್‌ ಖಾನ್‌. ಇವರೆಲ್ಲಾ ದ್ರೋಹಿಗಳು. ಅವರು ಪಾಕಿಸ್ತಾನಕ್ಕೆ ಹಣ ನೀಡುತ್ತಾರೆ. ನಿಮಗೇಕೆ ಇದು ಅರ್ಥವಾಗುತ್ತಿಲ್ಲ? ಈ ಪೋಸ್ಟ್‌ ಇಷ್ಟವಾದರೆ ರೀಟ್ವಿಟ್‌ ಮಾಡಿ’ ಎಂದು ಬರೆಯಲಾಗಿದೆ.

ಬಳಿಕ ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆದರೆ ನಿಜಕ್ಕೂ ‘ಮಿಷನ್‌ ಮಂಗಳ್‌’ ಚಿತ್ರದ ಅಷ್ಟೂಸಂಭಾವನೆಯನ್ನು ಅಕ್ಷಯ್‌ ಕುಮಾರ್‌ ಚಂದ್ರಯಾನ-3ಗೆ ಮೀಸಲಿಡುತ್ತಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟವಾಗಿದೆ. ಸುದ್ದಿಸಂಸ್ಥೆಯೊಂದು ನಟ ಅಕ್ಷಯ್‌ ಕುಮಾರ್‌ ಅವರ ನಿಕಟವರ್ತಿಗಳ ಬಳಿ ಸ್ಪಷ್ಟನೆ ಪಡೆದಿದ್ದು, ಅವರೂ ಇದು ಸುದ್ದಿ ಸುಳ್ಳೆಂದು ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ ಮಿಷನ್‌ ಮಂಗಳ್‌ ನಿರ್ಮಾಪಕ ಮತ್ತು ನಿದೇರ್ಶಕ ಆರ್‌.ಬಾಲ್ಕಿ ಅವರನ್ನು ಸಂಪರ್ಕಿಸಿದಾಗ ಅವರು, ‘ಇಂಥ ಸುಳ್ಳು ಸುದ್ದಿಗಳು ಎಲ್ಲಿ ಹುಟ್ಟುತ್ತವೆ ನನಗಂತೂ ತಿಳಿಯದು. ಅಕ್ಷಯ್‌ ಕುಮಾರ್‌ ಈ ಬಗ್ಗೆ ಘೋಷಿಸಿದ್ದು ನಾನೆಲ್ಲೂ ಘೋಷಿಸಿಲ್ಲ. ಇದೊಂದು ಸುಳ್ಳು ಸುದ್ದಿ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ