
ಮಾಗಡಿ : ರಾಜಕೀಯ ಮುಂಖಂಡರ ಅಭಿಮಾನಿಗಳ ಫೇಸ್ ಬುಕ್ ವಾರ್ ಇದೀಗ ಮಿತಿ ಮೀರಿದೆ. ಮಾಗಡಿ ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್ ಗೂಂಡಾಗಿರಿ ನಡೆಸಿದ್ದು, ಪುರಸಭೆ ಸದಸ್ಯ ಬಾಲರಘು, ಜೆಡಿಎಸ್ ಮುಖಂಡ ಹೊಸಳ್ಳಿ ಮುನಿರಾಜ್, ಹೊಸಪೇಟೆ ಜವರೇಗೌಡಗೆ ಹಲ್ಲೆ ನಡೆಸಿದ್ದಾರೆ.
ನಲಪ್ಪಾಡ್ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ರೀತಿಯಲ್ಲಿಯೇ ಪೊಲೀಸರೆದುರೇ ಪುರುಷೋತ್ತಮಗ್ ಗ್ಯಾಂಗ್ ಹಲ್ಲೆ ನಡೆಸಿದೆ.
ಹಲ್ಲೆಗೊಳಗಾದ ಬಾಲರಘು, ಜೆಡಿಎಸ್ ಮುಖಂಡ ಮುನಿರಾಜ್, ಜವರೇಗೌಡ ಸದಸ್ಯ ಈ ಸಂಬಂಧ ದೂರು ದಾಖಲು ಮಾಡಿದ್ದು, ಹಲ್ಲೆ ನಡೆಸಿದ ಪುರುಷೋತ್ತಮ್ ಗ್ಯಾಂಗ್’ ನಿಂದಲೂ ಕೂಡ ಪ್ರತಿದೂರು ದಾಖಲಾಗಿದೆ. ತಮ್ಮ ಪ್ರಭಾವವನ್ನು ಬಳಸಿಕೊಂಡು ಹಲ್ಲೆಗೊಳಗಾದವರ ವಿರುದ್ಧವೇ ದೂರು ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.