ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮ; ಇಂದು ಮಹತ್ವದ ನಿರ್ಧಾರ

By Suvarnanews Web DeskFirst Published Mar 14, 2018, 9:09 AM IST
Highlights

ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮವನ್ನಾಗಿ ಘೋಷಿಸುವ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಇನ್ನು, ಮತ್ತೊಂದೆಡೆ ಪ್ರತ್ಯೇಕ ಧರ್ಮದ ಶಿಫಾರಸ್ಸಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಒಕ್ಕೂಟ ವಿರೋಧಿಸಿದ್ದು ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಮಾ. 14): ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮವನ್ನಾಗಿ ಘೋಷಿಸುವ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಇನ್ನು, ಮತ್ತೊಂದೆಡೆ ಪ್ರತ್ಯೇಕ ಧರ್ಮದ ಶಿಫಾರಸ್ಸಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಒಕ್ಕೂಟ ವಿರೋಧಿಸಿದ್ದು ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.

ತಜ್ಞರ ಸಮಿತಿ ಹಾಗೂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಶಿಫಾರಸುಗಳನ್ನ ಅಂಗೀಕರಿಸಿ ಪ್ರತ್ಯೇಕ ಲಿಂಗಾಯತ ಧರ್ಮದ ಘೋಷಣೆ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇಂದು ಸಂಜೆ ನಡೆಯುವ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನ ಸರ್ಕಾರ ಕೈಗೊಳ್ಳುವ ಸಾಧ್ಯತೆ ಇದೆ. 

ಇನ್ನು, ಮತ್ತೊಂದೆಡೆ ಸರ್ಕಾರದ ಮಾಡಲು ಹೊರಟಿರುವ ಕ್ರಮದ ವಿರುದ್ಧ ವೀರಶೈವ ಲಿಂಗಾಯತ ಒಕ್ಕೂಟ ಪ್ರತಿಭಟಿಸಲು ಮುಂದಾಗಿದೆ. ಇಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿರುವ ಹಿನ್ನಲೆ, ನಿನ್ನೆವೀರಶೈವ ಲಿಂಗಾಯತ ಒಕ್ಕೂಟದ ಮಾಠಧೀಶರುಗಳು, ಮುಖಂಡರುಗಳು, ಶಾಮನೂರು ಶಿವಶಂಕರಪ್ಪನವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ಕೇಂದ್ರಕ್ಕೆ ಶಿಪಾರಸ್ಸು ಮಾಡುವುದಾದ್ರೆ  ವೀರಶೈವ ಲಿಂಗಾಯತ ಎಂದೇ ಮಾಡಿ ಇಲ್ಲದಿದ್ದರೇ ಸಮಾಜ ವಿಭಜಿಸುವುದು ಬೇಡ. ಒಂದು ವೇಳೆ ವ್ಯತಿರಿಕ್ತ ತೀರ್ಮಾನ ತೆಗೆದುಕೊಂಡರೇ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ..  
 

click me!