ಫೇಸ್’ಬುಕ್’ನಲ್ಲಿ ಜಾಹಿರಾತು ಮೂಲಕ ಹಣ ಮಾಡಿಕೊಳ್ಳುವವರಿಗೆ ಬೀಳಲಿದೆ ಕಡಿವಾಣ

Published : Sep 13, 2017, 08:46 PM ISTUpdated : Apr 11, 2018, 12:53 PM IST
ಫೇಸ್’ಬುಕ್’ನಲ್ಲಿ ಜಾಹಿರಾತು ಮೂಲಕ ಹಣ ಮಾಡಿಕೊಳ್ಳುವವರಿಗೆ ಬೀಳಲಿದೆ ಕಡಿವಾಣ

ಸಾರಾಂಶ

ಫೇಸ್’ಬುಕ್’ನಲ್ಲಿ ಜಾಹಿರಾತು ಮೂಲಕ ಹಣ ಮಾಡಿಕೊಳ್ಳುವವರಿಗೆ, ಸೆನ್ಸೇಶನಲ್ ಹೆಡ್’ಲೈನ್ ಕೊಟ್ಟು ಜನರನ್ನು ವಂಚಿಸುವವರಿಗೆ ಕಡಿವಾಣ ಹಾಕಲು ಫೇಸ್’ಬುಕ್ ಹೊಸ ನೀತಿಯನ್ನು ಪರಿಚಯಿಸಲಿದೆ.  

ನವದೆಹಲಿ (ಸೆ.13): ಫೇಸ್’ಬುಕ್’ನಲ್ಲಿ ಜಾಹಿರಾತು ಮೂಲಕ ಹಣ ಮಾಡಿಕೊಳ್ಳುವವರಿಗೆ, ಸೆನ್ಸೇಶನಲ್ ಹೆಡ್’ಲೈನ್ ಕೊಟ್ಟು ಜನರನ್ನು ವಂಚಿಸುವವರಿಗೆ ಕಡಿವಾಣ ಹಾಕಲು ಫೇಸ್’ಬುಕ್ ಹೊಸ ನೀತಿಯನ್ನು ಪರಿಚಯಿಸಲಿದೆ.  

ಫೇಸ್’ಬುಕ್’ನಲ್ಲಿ ಡಿಜಿಟಲ್  ಜಾಹಿರಾತುಗಳನ್ನು ಹರಿಯಬಿಡಲಾಗುತ್ತಿದ್ದು ತಿಂಗಳಿಗೆ 2 ಬಿಲಿಯನ್’ಗಿಂತಲೂ ಹೆಚ್ಚಿನ ಬಳಕೆದಾರರನ್ನು ಇದು ತಲುಪುತ್ತಿದೆ. ಹಾಗಾಗಿ ನಮ್ಮ ಗ್ರಾಹಕರನ್ನು ನಾವು ತಲುಪಲಾಗುತ್ತಿಲ್ಲ. ಕೆಲವು ಬ್ರಾಂಡೆಡ್ ವಸ್ತುಗಳನ್ನು ಹಾನಿಕಾರಕ ಎಂಬಂತೆ ಬಿಂಬಿಸುವ ಮಾಹಿತಿಯನ್ನು ಹಾಕಿ ಪ್ರಮೋಟ್ ಮಾಡಲಾಗುತ್ತಿದೆ ಎಂದು ಮಾರಾಟಗಾರರಿಂದ ಆರೋಪವನ್ನು ಎದುರಿಸಿತ್ತು.

ನಾವಿದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು ನಮ್ಮ ಜಾಹಿರಾತುದಾರರ ನಂಬಿಕೆಯನ್ನು ಉಳಿಸಿಕೊಳ್ಳಲು, ಇನ್ನಷ್ಟು ಹೂಡಿಕೆ ಮಾಡಲು ವಿಶ್ವಾಸ ತುಂಬಲು ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಫೇಸ್’ಬುಕ್ ಪ್ರತಿಕ್ರಿಯಿಸಿದೆ. ಫೇಸ್’ಬುಕ್ ಪಬ್ಲಿಶರ್’ಗಳಿಗೆ ನಿರ್ದಿಷ್ಟ ಗೈಡ್’ಲೈನ್’ಗಳನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.

ದ್ವೇಷಪೂರಿತ ಭಾಷಣ, ಹಿಂಸೆ, ಕೋಮುವಾದ, ಭಯೋತ್ಪಾದನೆಯನ್ನು ಪ್ರಚೋದಿಸುವಂತಹ ಯಾವುದೇ ವಿಚಾರಗಳಿಗೆ ಅವಕಾಶ ನೀಡುವುದಿಲ್ಲ. ಅಂತದ್ದೇನಾದರೂ ಕಂಡುಬಂದರೆ ನಾವದನ್ನು ಕೂಡಲೇ ತೆಗೆದು ಹಾಕುತ್ತೇವೆ ಎಂದು ಹೇಳಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿದ್ಯಾರ್ಥಿ ರಾಜಕಾರಣಕ್ಕೆ ಗ್ರೀನ್ ಸಿಗ್ನಲ್? ಪಠ್ಯದ ಜೊತೆ ರಾಜಕೀಯ ಪಾಠ? ಉನ್ನತ ಶಿಕ್ಷಣ ಸಚಿವರ ಸ್ಫೋಟಕ ಸುಳಿವು, ಹೇಳಿದ್ದೇನು?
ಅಮೂಲ್‌ಗೆ ಗೇಟ್‌ಪಾಸ್‌, ಆರ್‌ಸಿಬಿಗೆ ಬಲಗಾಲಿಟ್ಟು ಬರುವ ಹಾದಿಯಲ್ಲಿ ಕೆಎಂಎಫ್‌ ನಂದಿನಿ!