ಕಟ್ಟಡಕ್ಕೆ ಡಿಕ್ಕಿ ಹೊಡೆದ ಎಫ್-16 ಯುದ್ಧ ವಿಮಾನ: ಪೈಲೆಟ್ ಪಾರು!

Published : May 17, 2019, 11:50 AM IST
ಕಟ್ಟಡಕ್ಕೆ ಡಿಕ್ಕಿ ಹೊಡೆದ ಎಫ್-16 ಯುದ್ಧ ವಿಮಾನ: ಪೈಲೆಟ್ ಪಾರು!

ಸಾರಾಂಶ

ಕಟ್ಟಡಕ್ಕೆ ಡಿಕ್ಕಿ ಹೊಡೆದ ಎಫ್-16 ಯುದ್ಧ ವಿಮಾನ| ದೈನಂದಿನ ತರಬೇತಿ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನ| ದ.ಕ್ಯಾಲಿಫೋರ್ನಿಯಾದ ಮಾರ್ಚ್ ರಿಸರ್ವ್ ಬೇಸ್ ಬಳಿ ಘಟನೆ| ಪ್ಯಾರಾಚೂಟ್ ಸಹಾಯದಿಂದ ಅಪಾಯದಿಂದ ಪಾರಾದ ಪೈಲೆಟ್| ಪೈಲೆಟ್ ಸೇರಿ ಐವರು ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲು|

ಲಾಸ್ ಎಂಜಿಲಿಸ್(ಮೇ.17): ದೈನಂದಿನ ತರಬೇತಿಗಾಗಿ ಹಾರಾಟ ನಡೆಸುತ್ತಿದ್ದ ಅಮೆರಿಕದ ಎಫ್-16 ಯುದ್ಧ ವಿಮಾನ, ಪೈಲೆಟ್ ನಿಯಂತ್ರಣ ತಪ್ಪಿ ಕಟ್ಟಡದ ಮೇಲೆ ಅಪಘಾತಕ್ಕೀಡಾದ ಘಟನೆ ನಡೆದಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಮಾರ್ಚ್ ಏರ್ ರಿಸರ್ವ್ ಬೇಸ್ ಬಳಿ ಪೈಲೆಟ್ ನಿಯಂತ್ರಣ ತಪ್ಪಿದ ಎಫ್-16 ಯುದ್ಧ ವಿಮಾನ, ಕಟ್ಟಡದ ಛಾವಣಿಗೆ ಡಿಕ್ಕಿ ಹೊಡೆದು ಧ್ವಂಸಗೊಂಡಿದೆ. ಈ ವೇಳೆ ಪೈಲೆಟ್ ಪ್ಯಾರಾಚೂಟ್ ಸಹಾಯದ ಮೂಲಕ ಹಾರಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.

ಇನ್ನು ಯುದ್ಧ ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿದ್ದು, ಪೈಲೆಟ್ ಸೇರಿದಂತೆ ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?