ಲೋಕ ಸಮರಕ್ಕೆ ಅಭ್ಯರ್ಥಿ ಎಷ್ಟು ರೂ. ಖರ್ಚು ಮಾಡಬಹುದು?

By Web DeskFirst Published Mar 10, 2019, 11:21 PM IST
Highlights

ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸುತ್ತಿದ್ದಂತೆ ಬಹಳ ಪ್ರಮುಖವಾದ ಮಾತೊಂದನ್ನು ಹೇಳಿದೆ. ಫೇಕ್ ನ್ಯೂಸ್ ಮತ್ತು ಪೇಯ್ಡ್ ನ್ಯೂಸ್ ಗಳ ಮೇಲೆಯೂ ನಿಗಾ ವಹಿಸಲಾಗುವುದು ಎಂದಿದೆ. ಜತೆಗೆ ಅಭ್ಯರ್ಥಿಗಳಿಗೆ ಖರ್ಚಿನ ಮಿತಿ ಹೇರಿದೆ.

ಬೆಂಗಳೂರು[ಮಾ. 10] ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಎಷ್ಟು ಹಣ ಖರ್ಚುಮಾಡಬಹುದು? ಅಂದರೆ ಪ್ರಚಾರಕ್ಕೆ ಎಷ್ಟು ಹಣ ವ್ಯಯಿಸಬಹುದು? ಇದಕ್ಕೆ ಆಯೋಗ ಉತ್ತರ ನೀಡಿದೆ.

ಅಭ್ಯರ್ಥಿ 70 ಲಕ್ಷ ರೂ. ಖರ್ಚು ಮಾಡಲು ಮಿತಿ ಹೇರಲಾಗಿದೆ. ಇದರಲ್ಲಿ ಬ್ಯಾನರ್, ಬಂಟಿಂಗ್ಸ್, ಸಭೆ-ಸಮಾರಂಭ, ಸೋಶಿಯಲ್ ಮೀಡಿಯಾ ಎಲ್ಲವನ್ನು ಒಳಗೊಳ್ಳುತ್ತದೆ.

ನೀತಿ ಸಂಹಿತೆ ಜಾರಿ, ಸೋಶಿಯಲ್ ಮೀಡಿಯಾದಲ್ಲಿ ಏನು ಬರೆಯಬಾರದು?

ಕಳೆದ ವಿಧಾನಸಭಾ ಚುನಾವಣೆ ವೇಳೆ ಅಭ್ಯರ್ಥಿಗೆ 28 ಲಕ್ಷ ರೂ. ಮಿತಿ ನೀಡಲಾಗಿತ್ತು. ಲೋಕಸಭಾ ಕ್ಷೇತ್ರ ಅಂದರೆ ವ್ಯಾಪ್ತಿ ದೊಡ್ಡದಾಗಿರುವುದರಿಂದ ಮಿತಿಯಲ್ಲಿಯೂ ಏರಿಕೆ ಮಾಡಲಾಗಿದೆ.

click me!