ಭತ್ಯೆಗಾಗಿ ನಕಲಿ ವಿಮಾನ ಟಿಕೆಟ್: ಮಾಜಿ ಸಂಸದನಿಗೆ 3 ವರ್ಷ ಜೈಲು!

By Web DeskFirst Published Dec 5, 2018, 8:14 AM IST
Highlights

ಮಾಜಿ ಸದಸ್ಯರೊಬ್ಬರಿಗೆ ದೆಹಲಿ ಸಿಬಿಐ ವಿಶೇಷ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

 

ನವದೆಹಲಿ[ಡಿ.05]: ಪ್ರಯಾಣ ಭತ್ಯೆ ಗಿಟ್ಟಿಸಿಕೊಳ್ಳಲು ವಿಮಾನ ಟಿಕೆಟ್‌ಗಳನ್ನು ಫೋರ್ಜರಿ ಮಾಡಿದ್ದ ಮೀಜೋರಂನ ರಾಜ್ಯಸಭೆಯ ಮಾಜಿ ಸದಸ್ಯರೊಬ್ಬರಿಗೆ ದೆಹಲಿ ಸಿಬಿಐ ವಿಶೇಷ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2002ರಿಂದ 2014ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದ, ಮೀಜೋ ನ್ಯಾಷನಲ್‌ ಫ್ರಂಟ್‌ನ ಮಾಜಿ ಸಂಸದ ಲಾಲ್‌್ಹಮಿಂಗ್‌ ಲಿಯಾನ ಅವರೇ ಶಿಕ್ಷೆಗೆ ಒಳಗಾದ ರಾಜಕಾರಣಿ. ವಂಚನೆ, ಫೋರ್ಜರಿ, ಫೋರ್ಜರಿ ಮಾಡಲ್ಪಟ್ಟದಾಖಲೆಯನ್ನು ಅಸಲಿಯಾಗಿ ಬಳಸಿದ ಆರೋಪಗಳಡಿ ಅವರು ದೋಷಿ ಎಂದು ವಿಶೇಷ ನ್ಯಾಯಾಧೀಶ ಎನ್‌.ಕೆ. ಮಲ್ಹೋತ್ರಾ ತೀರ್ಪು ನೀಡಿದ್ದಾರೆ. ಅಲ್ಲದೆ 11 ಲಕ್ಷ ರು. ದಂಡವನ್ನೂ ವಿಧಿಸಿದ್ದಾರೆ. ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಅನುಕೂಲ ಕಲ್ಪಿಸಲು ಅವರಿಗೆ ನ್ಯಾಯಾಲಯ ಜಾಮೀನನ್ನೂ ಮಂಜೂರು ಮಾಡಿದೆ.

2008ರಿಂದ 2014ರವರೆಗೆ ಎರಡನೇ ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಲಿಯಾನ ಅವರು ರಾಜ್ಯಸಭೆಯಿಂದ ಪ್ರಯಾಣ ಭತ್ಯೆ ಪಡೆಯಲು ಇ-ಟಿಕೆಟ್‌ಗಳನ್ನು ತಮ್ಮದೇ ಕಂಪ್ಯೂಟರ್‌ನಲ್ಲಿ ಫೋರ್ಜರಿ ಮಾಡಿದ್ದರು. ಆ ದಾಖಲೆ ಸಲ್ಲಿಸಿ ರಾಜ್ಯಸಭೆ ಸಚಿವಾಲಯದಿಂದ 10.36 ಲಕ್ಷ ರು. ಹಣವನ್ನು ಭತ್ಯೆಯಾಗಿ ಪಡೆದಿದ್ದರು. ಈ ಕುರಿತು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸಿಬಿಐನಿಂದ ತನಿಖೆ ನಡೆದಿತ್ತು.

click me!