ಮೆಕ್ಕಾ ಮಸೀದಿ ತೀರ್ಪಿತ್ತಿದ್ದ ಜಡ್ಜ್ ರೆಡ್ಡಿ ಟಿಜೆಎಸ್ ಪಕ್ಷಕ್ಕೆ

By Web DeskFirst Published Oct 15, 2018, 8:34 AM IST
Highlights

ಪಕ್ಷದ ಅಧ್ಯಕ್ಷ ಎಂ.ಕೋದಂಡರಾಮ, ರೆಡ್ಡಿ ಅವರನ್ನು ಟಿಜೆಎಸ್‌ಗೆ ಸೇರ್ಪಡೆ ಮಾಡಿಕೊಂಡರು. ಟಿಜೆಎಸ್, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಟಿಡಿಪಿ, ಸಿಪಿಐ ಜೊತೆ ಮೈತ್ರಿ ಮಾಡಿಕೊಂಡಿದೆ. 

ಹೈದ್ರಾಬಾದ್: ಇಲ್ಲಿನ ಮೆಕ್ಕಾಮಸೀದಿ ಸ್ಫೋಟ ಪ್ರಕರಣದಲ್ಲಿ ಅಸೀಮಾನಂದ ಮತ್ತು ಇತರರನ್ನು ಖುಲಾಸೆ ಮಾಡಿ ತೀರ್ಪು ನೀಡಿದ ಮರುದಿನವೇ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ನ್ಯಾ. ರವೀಂದರ್ ರೆಡ್ಡಿ, ಭಾನುವಾರ ತೆಲಂಗಾಣ ಜನಸಮಿತಿ ಪಕ್ಷ ಸೇರಿದ್ದಾರೆ. 

ಪಕ್ಷದ ಅಧ್ಯಕ್ಷ ಎಂ.ಕೋದಂಡರಾಮ, ರೆಡ್ಡಿ ಅವರನ್ನು ಟಿಜೆಎಸ್‌ಗೆ ಸೇರ್ಪಡೆ ಮಾಡಿಕೊಂಡರು. ಟಿಜೆಎಸ್, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಟಿಡಿಪಿ, ಸಿಪಿಐ ಜೊತೆ ಮೈತ್ರಿ ಮಾಡಿಕೊಂಡಿದೆ. 

* Masjid blast case judge K Ravinder Reddy joins Telangana Jana Samithi Party in presence of Prof. Kodandaram* pic.twitter.com/F6e8DAGcu7

— MOHD OMER QURESHI (@kshadbhai17)

ವಿಶೇಷವೆಂದರೆ ಕಳೆದ ತಿಂಗಳು ರೆಡ್ಡಿ, ಬಿಜೆಪಿ ರಾಷ್ಟ್ರಪ್ರೇಮದ ಪಕ್ಷ ಎಂದು ಹೊಗಳುವ ಮೂಲಕ ಆ ಪಕ್ಷ ಸೇರುವ ಸುಳಿವು ನೀಡಿದ್ದರು.

click me!