ಹಲವು ಅನುಮಾನಗಳನ್ನು ಹುಟ್ಟು ಹಾಕಿದ ಮನೋಹರ ಪರಿಕ್ಕರ್ ಡಿಸ್ಚಾರ್ಜ್

By Web DeskFirst Published Oct 15, 2018, 7:58 AM IST
Highlights

 ಮನೋಹರ ಪರಿಕ್ಕರ್ ಡಿಸ್ಚಾರ್ಜ್ ಬೆಳವಣಿಗೆ ಸಾಕಷ್ಟು ಅನುಮಾನ ಹಾಗೂ ಚರ್ಚೆಗಳನ್ನು ಹುಟ್ಟುಹಾಕಿದೆ.

ಪಣಜಿ, [ಅ.15]: ಕಳೆದೊಂದು ತಿಂಗಳಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೇದೋಜೀರಕ ಗ್ರಂಥಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಸಿಎಂ ಮನೋಹರ ಪರಿಕ್ಕರ್ ಭಾನುವಾರ ದಿಢೀರನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಗೋವಾಕ್ಕೆ ಮರಳಿದ್ದಾರೆ.

ವಿಶೇಷ ವಿಮಾನದಲ್ಲಿ ಪಣಜಿಗೆ ಆಗಮಿಸಿದ 62 ವರ್ಷದ   ಪಕ್ಕರ್‌ರನ್ನು, ಆ್ಯಂಬುಲೆನ್ಸ್ ಮೂಲಕ ಅವರ ಖಾಸಗಿ ನಿವಾಸಕ್ಕೆ ಕರೆ ದೊಯ್ಯಲಾಯಿತು. ಸರ್ಕಾರಿ ಸ್ವಾಮ್ಯದ ಗೋವಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಸಿಬ್ಬಂದಿ ಅವರ ನಿವಾಸದಲ್ಲಿ ಬೀಡುಬಿಟ್ಟಿದ್ದಾರೆ.

ಮುಂಬೈ ಹಾಗೂ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಮರಳಿದ್ದ ಪರ‌್ರಿಕರ್ ಸೆ.15ರಂದು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಬೆಳಗ್ಗೆಯಷ್ಟೇ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. 

ಆದರೆ ಬಳಿಕ ಏಕಾಏಕಿ ಏಮ್ಸ್ ಆಡಳಿತ ಅವರನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತು. ಹೀಗಾಗಿ ಪರಿಕ್ಕರ್ ಅವರು ಗೋವಾಕ್ಕೆ ಮರಳಿದ್ದಾರೆ. ಈ ಬೆಳವಣಿಗೆ ಸಾಕಷ್ಟು ಅನುಮಾನ ಹಾಗೂ ಚರ್ಚೆಗಳನ್ನು ಹುಟ್ಟುಹಾಕಿದೆ.

ಆದರೆ ಪರಿಕ್ಕರ್ ಆರೋಗ್ಯ ಸ್ಥಿರವಾಗಿದೆ ಎಂದು ಅವರ ಆಪ್ತ ಕಾರ‌್ಯದರ್ಶಿರೂಪೇಶ ಕಾಮತ್ ಸ್ಪಷ್ಟನೆ ನೀಡಿದ್ದಾರೆ.

click me!